ಸಮಾಜ ಸೇವೆ

ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು

ಮಾನವತೆಯ ಹರಿಕಾರ, ಯುಗಪುರುಷ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ದಿವ್ಯ ಹಸ್ತದಿಂದಲೇ ಪ್ರತಿಷ್ಠಾಪನೆಗೊಂಡು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಸಹಾಯ, ಸಹಕಾರ ಬೆಂಬಲದೊಂದಿಗೆ ನವೀಕರಣಗೊಂಡು ವಿಶ್ವವಿಖ್ಯಾತಿ ಗಳಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರ ಕರೋನಾ ಸಂದರ್ಭ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಅಪೂರ್ವ ಸೇವೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಈ ಅನುಕರಣೀಯ ನಡೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಬೆಂಬಲದೊಂದಿಗೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್‍ರವರ ಉಪಸ್ಥಿತಿಯಲ್ಲಿ , […]

ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು Read More »

ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಗೋಕರ್ಣನಾಥ ಸೇವಾದಳ

ಕಳೆದ ವಾರವಷ್ಟೇ ಕುದ್ರೋಳಿ ಕ್ಷೇತ್ರದ ‘ಮಂಗಳೂರು ದಸರಾ’ ಮಹೋತ್ಸವ ಮಾದರಿ ಉತ್ಸವವಾಗಿಸಲು ಪ್ರಮುಖ ಕಾರಣಕರ್ತರಾದ ಶ್ರೀ ಗೋಕರ್ಣನಾಥ ಸೇವಾದಳ ಸದಸ್ಯರು, ಕ್ಷೇತ್ರದ ಭಕ್ತರು, ಯುವಕರ ತಂಡದಿಂದ ಕ್ಷೇತ್ರದ ಪುಷ್ಕರಣಿ ಶುಚಿತ್ವ ಕಾರ್ಯ ಭಾನುವಾರ ಅಚ್ಚುಕಟ್ಟಾಗಿ ನೆರವೇರಿತು. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ, ಒಂದೇ ತಾಯಿಯ ಮಕ್ಕಳಂತೆ, ಪರಸ್ಪರ ಸಹೋದರತೆ ಸಾರುವ ರೀತಿಯಲ್ಲಿ ಬೆಳಗ್ಗೆ 9 ಗಂಟೆಗೆ ಶುಚಿತ್ವ ಕಾರ್ಯದಲ್ಲಿ ತೊಡಗಿಕೊಂಡ ಸದಸ್ಯರು ಮಧ್ಯಾಹ್ನ 12.30ರೊಳಗೆ ಪೂರ್ಣ ಸ್ವಚ್ಛತೆ ಮಾಡಿದರು… ಸುಮಾರು ಎರಡು ಲೋಡುಗಳಷ್ಟು

ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಗೋಕರ್ಣನಾಥ ಸೇವಾದಳ Read More »

ಶ್ರೀ ಗೋಕರ್ಣನಾಥ ಕೊ‌ ಅಪರೇಟಿವ್ ಬ್ಯಾಂಕ್‌ನಿಂದ ಅನ್ನದಾನ ಸೇವೆಗೆ ಒಂದು ಲಕ್ಷ ರೂಪಾಯಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನ್ನದಾನ ಸೇವೆಗೆ ಒಂದು ಲಕ್ಷ ರೂಪಾಯಿ ನೀಡಲಾಯಿತು.ಶ್ರೀ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂಗೆ ಬ್ಯಾಂಕ್ ಅಧ್ಯಕ್ಷ ಎಂ.ರಾಮಚಂದ್ರರವರು ಧನಸಹಾಯ ಹಸ್ತಾಂತರಿಸಿದರು. ಶ್ರೀಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್.ಆರ್, ಬ್ಯಾಂಕ್ ಜನರಲ್ ಮ್ಯಾನೇಜರ್ ಭರತ್ ಭೂಷಣ್, ಉಪಾಧ್ಯಕ್ಷ ರಾಧಾಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಹರೀಶ್ ಕೆ. ಪೂಜಾರಿ, ವಿಜಯ್ ಕುಮಾರ್ ಸೊರಕೆ, ಪದ್ಮನಾಭ, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ಗೋಕರ್ಣನಾಥ ಕೊ‌ ಅಪರೇಟಿವ್ ಬ್ಯಾಂಕ್‌ನಿಂದ ಅನ್ನದಾನ ಸೇವೆಗೆ ಒಂದು ಲಕ್ಷ ರೂಪಾಯಿ Read More »

You cannot copy content of this page

Scroll to Top