ಶ್ರೀ ಗೋಕರ್ಣನಾಥ ಕ್ಷೇತ್ರ: ಮಂಗಳೂರು ದಸರಾ: 2020

ದೇವಿಕಿರಣ್ ಕಲಾಕುಂಚದಲ್ಲಿ ಮೂಡಿದ ಜನಾರ್ದನ ಪೂಜಾರಿ

ಮಂಗಳೂರು : ಕಲಾವಿದ ದೇವಿಕಿರಣ್ ಗಣೇಶಪುರ ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿಯವರನ್ನು ತನ್ನ ಕಲಾಕುಂಚದಲ್ಲಿ ವರ್ಣರಂಜಿತವಾಗಿ ಮೂಡಿಸಿ ಸರ್ವರ ಪ್ರಶಂಸೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರದ ಕೋಶಾಧಿಕಾರಿ ಪದ್ಮಾರಾಜ್ ಉಪಸ್ಥಿತರಿದ್ದು ದೇವಿಕಿರಣ್ ಅವರ ಕಲಾ ನೈಪುಣ್ಯತೆಗೆ ಸಾಕ್ಷಿಯಾದರು.

ಬಣ್ಣದ ಪ್ರಪಂಚದಲ್ಲಿ ಅರಳಿದ ದೇವಿಕಿರಣ್:

ಕಾಂಚನದ ಬೆನ್ನೇರಿ ಕುಣಿಯುವಂತಹ ಆರಾಧಿಸಿಕೊಂಡು ಚಿತ್ರಕಲೆ, ಗಾಯನ, ನಟನೆ, ನಾಟ್ಯ, ಕಾರ್ಯಕ್ರಮ ನಿರೂಪಣೆ, ಮುಂತಾದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ದೇವಿಕಿರಣ್ ಗಣೇಶಪುರ ಅವರದು ತಂದೆ ಚಂದ್ರಹಾಸ ಪೂಜಾರಿ ತಾಯಿ ರತ್ನಾ ಕೋಟ್ಯಾನ್‌ರವರ ಮಗನಾದ ದೇವಿಕಿರಣ್‌ಗೆ ಬಣ್ಣವೇ ಪ್ರಪಂಚ. ಅದೇ ವೃತ್ತಿಯಾಯಿತು. ಗಾಯನವೇ ಪ್ರವೃತ್ತಿಯಾಯಿತು. ಇವರ ಕೈಬೆರಳ ಕುಣಿತದಲ್ಲಿ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯ, ಸಿನಿಮಾ ನಟರಾದ ಉಪೇಂದ್ರ, ವಿಷ್ಣುವರ್ಧನ್, ಶಂಕರ್ ನಾಗ್, ದರ್ಶನ್, ವಿಜಯ್ ರಾಘವೇಂದ್ರ, ಅಂತೆಯೇ ಆಂಜನೇಯ, ಶಿವಾಜಿ, ನರೇಂದ್ರ ಮೋದಿಯಂತಹ ಮಹಾನ್ ವ್ಯಕ್ತಿಗಳೆಲ್ಲರು ಚಿತ್ರಿತರಾದರು. ಮರಳಾಕೃತಿ ಸ್ಪರ್ಧೆಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿಯನ್ನು ಬಾಚಿಕೊಂಡ ಹೆಮ್ಮೆ ಕಿರಣ್ ಅವರದ್ದು. ನೂರಾರು ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿಕೊಂಡು ಉತ್ತಮ ನಿರೂಪಕನೆಂಬ ಹೆಗ್ಗಳಿಕೆಗೂ ಪಾತ್ರರಾದವರು. ಸಮಾನ ಮನಸ್ಕರನ್ನೊಳಗೊಂಡ ಶ್ರೀ ಶಾರದ ಕಲಾ ಪ್ರಕಾಶನದ ನಿರ್ಮಾಣದಲ್ಲಿ ಮೂಡಿ ಬಂದ “ಕುಡು ಅರಿ” ಹಾಗೂ ಕುರು ಕುರು ಮಾಮ ತುಳು ಆಲ್ಬಮ್‌ನ ಗಾಯಕರಾಗಿ ಇಡಿ ಸಮಸ್ತ ಜನಮಾನಸ ತುಳುನಾಡಿನತ್ತ ಮುಖಮಾಡುವಂತೆ ಮಾಡಿ, ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ ಬೆರಳೆಣಿಕೆಯ ಕಲಾವಿದರದಲ್ಲಿ ದೇವಿಕಿರಣ್ ಒಬ್ಬರು ಅಂದರೆ ಅತಿಶಯೋಕ್ತಿಯಲ್ಲ. ಸಿನಿಮಾದಲ್ಲಿಯೂ, ನಟಿಸಿದ ಹೆಗ್ಗಳಿಕೆ ಇವರದು ‘ಆ ಒಂದು ಕರೆ” ಕಿರು ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ ನಟಿಸಿ, ನಟನೆಗೂ ಸೈ ಎನಿಸಿದ ದೇವಿಕಿರಣ್ ಅವರನ್ನು ಸಕಲಕಲಾ ವಲ್ಲಭ ಅಂದರೆ ತಪ್ಪಾಗಲಿಕ್ಕಿಲ್ಲ. ಸಾವಿರಾರು ವೇದಿಕೆಗಳಲ್ಲಿ ಹಾಡಿ ಗಾಯಕರೆಂದು ಗುರುತಿಸಿಕೊಂಡರು. 2೦೦೦ಕ್ಕೂ ಮಿಕ್ಕಿ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡಿದ ಕೀರ್ತಿ ಇವರದು. 50ಕ್ಕೂ ಮಿಕ್ಕಿ ವೇದಿಕೆಯಲ್ಲಿ ನೇರವಾಗಿ, ಕ್ಷಣಮಾತ್ರದಲ್ಲಿ ಕಲಾಕುಂಚದಲ್ಲಿ ಪಡಿಮೂಡಿಸಿ ಜನರನ್ನು ಬೆರಗುಗೊಳಿಸಿದೆ ಮಾಂತ್ರಿಕಸಿವರು. “ಕುಡು ಅರಿ” ತುಳು ಆಲ್ಬಮ್ ಗೆ “ಉತ್ತಮ ಗಾಯಕ ಪ್ರಶಸ್ತಿ’ಯನ್ನು ತನ್ನದಾಗಿಸಿದ್ದಾರೆ. ಇವರೀಗ ಜನ ಸೋಜಿಗವ ಸೃಷ್ಟಿಸಿದ ಸಾಧಕರು,ಕುವೈಟ್ ಕೊಲ್ಲಿ ರಾಷ್ಟ್ರಗಳಲ್ಲಿ ಗಾಯನ ಚಿತ್ರಕಲೆಯನ್ನು ಪ್ರದರ್ಶಿಸಿ ದ.ಕ.ಜಿಲ್ಲೆಯನ್ನು ಪ್ರತಿನಿದಿಸುತ್ತಾರೆ ಎತ್ತ ನೋಡಿದರತ್ತ ಬೀರಿಹರು ತನ್ನೆಸರ ಕಿರಣ್ ಗಣೇಶಪುರ ಮಣ್ಣಲ್ಲಿ ಬಿರ್ವ ಕುವರನಾಗಿ ಮಾತೃ ಮನದಿ ಪ್ರೀತಿಸುವ ಮಾಣಿಕ್ಯ. ಬರೆದು ತುಂಬಿಸಲು ಅಸಾಧ್ಯ ಇವರ ಸಾಧನೆ, ಮಾತಿಗದು ನಿಲುಕದ ಭಾವನೆ ಬರೆದು ಕೊಡುವುದೆಸಿದ್ದರು ಬರೀಯ ಶಬ್ದಗಳು ಆದರೆ ಅವರು ಅದೆಲ್ಲಕ್ಕಿಂತಲೂ ಮೀರಿ ನಿಂತ ಭೀಮಂತರು.

ಎಸ್.ಪಿ.ಬಾಲಸುಬ್ರಹ್ಮಣ್ಯ ಹಾಗೂ ಎಸ್ ಜಾನಕಿಯವರಿಂದಲೇ ಬೇಷ್ ಅನಿಸಿಕೊಂಡ ದೇವಿಕಿರಣ್ ಗಣೇಶಪುರ ಇವರ ಕಲಾ ಬದುಕಿಗೆ ಶುಭವಾಗಲಿ ಕಲಾ ಮಾತೆ ಶಾರದೆ ಸದಾ ಇವರ ಜೊತೆಗಿರಲಿ.

1 thought on “ದೇವಿಕಿರಣ್ ಕಲಾಕುಂಚದಲ್ಲಿ ಮೂಡಿದ ಜನಾರ್ದನ ಪೂಜಾರಿ”

Leave a Comment

Your email address will not be published. Required fields are marked *

You cannot copy content of this page

Scroll to Top