ಮಂಗಳೂರು ದಸರಾ

ಮಂಗಳೂರು ದಸರಾ ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಶ್ಲಾಘನೆ

ಮಂಗಳೂರು: ಕರೊನಾ ಪರಿಸ್ಥಿತಿ ಮಧ್ಯೆ ಕಠಿಣ ನಿಯಮಗಳಿಂದಾಗಿ ಉತ್ಸವ, ಹಬ್ಬಗಳನ್ನು ನಡೆಸುವುದೇ ಸವಾಲು.‌ ಆದರೆ ಕುದ್ರೋಳಿ ಕ್ಷೇತ್ರದಲ್ಲಿ 10 ದಿವಸ ನಡೆದ ನವರಾತ್ರಿ ಉತ್ಸವ ಅಚ್ಚುಕಟ್ಟಾಗಿತ್ತು. ಸ್ವಯಂಸೇವಕರು ಶಿಸ್ತುಬದ್ಧವಾಗಿ ಜನರಿಗೆ ದೇವರ ದರುಶನ ಮತ್ತು ಅನ್ನ ಸಂತರ್ಪಣೆ, ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಇಡೀ ಕಾರ್ಯಕ್ರಮವೇ ಮಾದರಿಯಾಗಿಸಲು ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶ್ಲಾಘಿಸಿದರು. ಕುಟುಂಬ ಸಮೇತರಾಗಿ‌ ಭಾನುವಾರ ಕುದ್ರೋಳಿ ಕ್ಷೇತ್ರದ ದರುಶನ ಪಡೆದ ನಂತರ ಕ್ಷೇತ್ರದ ಪುಷ್ಕರಣಿಯಲ್ಲಿ ನಡೆಯುತ್ತಿದ್ದ ಶುಚಿತ್ವ […]

ಮಂಗಳೂರು ದಸರಾ ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಶ್ಲಾಘನೆ Read More »

‘ನಮ್ಮ ಸುರಕ್ಷತೆ’ಯೊಂದಿಗೆ ಸಂಪನ್ನಗೊಂಡಿತು ‘ನಮ್ಮ ಮಂಗಳೂರು ದಸರಾ’

ಮಂಗಳೂರು:ವಿಶ್ವವಿಖ್ಯಾತ ಮಂಗಳೂರು ದಸರಾ ಈ ಬಾರಿ ಕೊರೋನಾ ಆತಂಕದ ನಡುವೆಯೂ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಮಂಗಳೂರು ದಸರಾ ಎಂದರೆ ಅದು ಧಾರ್ಮಿಕ, ಸಾಂಸ್ಕೃತಿಕ, ಜಾನಪದ ವೈವಿಧ್ಯತೆಯ ಆಡುಂಬೊಲ. ಈ ಉತ್ಸವದಲ್ಲಿ ಧಾರ್ಮಿಕ ನಂಬಿಕೆಯ ಜತೆ ಕರ್ನಾಟಕ ಕರಾವಳಿಯ ಆರ್ಥಿಕ ಪುನಶ್ಚೇತನವೂ ಅಡಗಿದೆ. ಶ್ರೀದುರ್ಗೆ ಅಂದರೆ ಲೋಕದ ಸಂಕಷ್ಟ ದೂರ ಮಾಡುವ ಮಹಾಮಾತೆ.ಆ ದೇವಿಯ ಒಂಬತ್ತು ದಿನಗಳ ಉತ್ಸವ ನಡೆದರೆ ಖಂಡಿತಾ ಲೋಕಕ್ಕೆ ಬಂದಿರುವ ಸಂಕಷ್ಟ ಜಗತ್ತಿನಿಂದಲೇ ದೂರವಾಗಲಿದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು. ಆದರೆ ಈ ಬಾರಿಯ ಮಂಗಳೂರು ದಸರಾದ

‘ನಮ್ಮ ಸುರಕ್ಷತೆ’ಯೊಂದಿಗೆ ಸಂಪನ್ನಗೊಂಡಿತು ‘ನಮ್ಮ ಮಂಗಳೂರು ದಸರಾ’ Read More »

ಕುದ್ರೋಳಿಯ ಕ್ಷೇತ್ರದ ನವರಾತ್ರಿ ಮೂರ್ತಿಗಳಿಗೆ ಜೀವ ತುಂಬುವ ಕಲಾವಿದ “ಕುಬೇರ” ಮತ್ತು ತಂಡ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ “ಮಂಗಳೂರು ದಸರಾ” ಸಂಭ್ರಮಕ್ಕೆ ಮೆರಗು ನೀಡುವ ಗಣಪತಿ,ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾಮಾತೆಯ ಮಣ್ಣಿನ‌ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಅನ್ನುತ್ತಾರೆ.ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲೂ ಕಾಣಿಸಿಕೊಳ್ಳೋದಿಲ್ಲ. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನಗಳಲ್ಲಿ ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು.ಅದೇ ತಂಡದಲ್ಲಿ ಕಲಾವಿದನಾಗಿ ತನ್ನ 13

ಕುದ್ರೋಳಿಯ ಕ್ಷೇತ್ರದ ನವರಾತ್ರಿ ಮೂರ್ತಿಗಳಿಗೆ ಜೀವ ತುಂಬುವ ಕಲಾವಿದ “ಕುಬೇರ” ಮತ್ತು ತಂಡ Read More »

ಶ್ರದ್ಧಾ ಭಕ್ತಿಯಿಂದ ಶಿಸ್ತುಬದ್ಧ ಮಂಗಳೂರು ದಸರಾ ಸಂಪನ್ನ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನಾ ಪೂಜೆ ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಯಿತು. ಸಂಜೆ ವಿಸರ್ಜನಾ ಪೂಜೆ ನೆರವೇರಿದ ಬಳಿಕ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ, ಶಾರದೆ ಮೂರ್ತಿಗಳ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನಗೊಂಡಿತು. ಅ.26ರಂದು ರಾತ್ರಿ 6.30ಕ್ಕೆ ವಿಸರ್ಜನಾ ಪೂಜೆ ನಡೆದರೆ, 8ಗಂಟೆಗೆ ದೇವಸ್ಥಾನದ ಪುಷ್ಕರಿಣಿಯಲ್ಲಿ ಮಹಾಗಣಪತಿ ಮೂರ್ತಿಯ ವಿಸರ್ಜನೆ ಆರಂಭವಾಗಿ ರಾತ್ರಿ 1.45ಕ್ಕೆ ಶಾರದಾ ದೇವಿಯ ವಿಸರ್ಜನೆಯಾಯಿತು. ಗಣಪತಿ ಸಹಿತ ಉಳಿದ ಮೂರ್ತಿಗಳನ್ನು ದೇವಸ್ಥಾನಕ್ಕೆ

ಶ್ರದ್ಧಾ ಭಕ್ತಿಯಿಂದ ಶಿಸ್ತುಬದ್ಧ ಮಂಗಳೂರು ದಸರಾ ಸಂಪನ್ನ Read More »

ಮನಸೂರೆಗೊಂಡ ಹುಲಿ ವೇಷ ನರ್ತನ

ಮಂಗಳೂರು : ಜಗದ್ವಿಖ್ಯಾತ ಮಂಗಳೂರು ದಸರಾ ಕೊನೆಯ ದಿನ ಸಾವಿರಾರು ಭಕ್ತರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಬೇಟಿ ನೀಡಿದರು. ಸಂಜೆಯ ಬಳಿಕ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ನರ್ತನ ಕ್ಷೇತ್ರದ ಪ್ರಾಂಗಣದಲ್ಲಿ ಜರಗಿತು. ಜನಾರ್ದನ ಪೂಜಾರಿಯವರ ಭಾವಚಿತ್ರವಿರುವ ಹುಲಿವೇಷ ಆಕರ್ಷಣೆಯಾಗಿತ್ತು. ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಕಾರಣಕರ್ತರಾದ ಎಲ್ಲರಿಗೂ‌ ಕ್ಷೇತ್ರದ ಆಡಳಿತ ಸಮಿತಿ ಕೃತಜ್ಞತೆಯನ್ನು ಸಲ್ಲಿಸಿದೆ. ಜಿಲ್ಲಾಡಳಿತ ನೀಡಿದ ಮಾರ್ಗಸೂಚಿಯಂತೆ ಮಂಗಳೂರು ದಸರಾ ಮಹೋತ್ಸವವನ್ನು ಆಚರಿಸಲಾಗಿದ್ದು, ಮಾದರಿ ದಸರಾವಾಗಿ ಮೂಡಿಬಂದಿದೆ.ಈ

ಮನಸೂರೆಗೊಂಡ ಹುಲಿ ವೇಷ ನರ್ತನ Read More »

ಮಂಗಳೂರು ದಸರಾ : ಇಂದು ಹುಲಿವೇಷ ಪ್ರದರ್ಶನ

ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಕಾರಣಕರ್ತರಾದ ಎಲ್ಲರಿಗೂ‌ ಕ್ಷೇತ್ರದ ಆಡಳಿತ ಸಮಿತಿ ಕೃತಜ್ಞತೆಯನ್ನು ಸಲ್ಲಿಸಿದೆ ಜಿಲ್ಲಾಡಳಿತ ನೀಡಿದ ಮಾರ್ಗಸೂಚಿಯಂತೆ ಮಂಗಳೂರು ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಮಾದರಿ ದಸರಾವಾಗಿ ಮೂಡಿಬಂದಿದೆ. ದಸರಾ ಮಹೋತ್ಸವದ ಮೂರ್ತಿ ವಿಸರ್ಜನಾ ದಿನ ಹುಲಿ ನರ್ತನ ಸೇವೆಗೆ ಜಿಲ್ಲಾಡಳಿತದಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಆಧಿಕಾರಿಗಳು ಷರತ್ತು ಬದ್ಧ ಆನುಮತಿ ನೀಡಿದ್ದಾರೆ. ಇಂದು ( 26.10.2020) ರಂದು ಕ್ಷೇತ್ರದಲ್ಲಿ ತಂಡಗಳ ಹುಲಿವೇಷ ನರ್ತನ ಸಂಜೆ 03.30 ರಿಂದ ರಾತ್ರಿ 10.30

ಮಂಗಳೂರು ದಸರಾ : ಇಂದು ಹುಲಿವೇಷ ಪ್ರದರ್ಶನ Read More »

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಜಯದಶಮಿಯ ಸಡಗರ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ( ಅಕ್ಟೋಬರ್.26) ವಿಜಯದಶಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ಸಂಜೆ 6ಗಂಟೆಗೆ ನಾರಾಯಣ ಗುರು ಭಾವಚಿತ್ರವಿರುವ ಟ್ಯಾಬ್ಲೋ ಹೊರಡಲಿದ್ದು, ವಾಹನದಲ್ಲಿ ಸೀಮಿತ ಭಕ್ತಾದಿಗಳು ಮಾತ್ರ ಭಾಗವಹಿಸಲಿದ್ದಾರೆ. ಈ ಟ್ಯಾಬ್ಲೋ ಕಂಬಳ ರಸ್ತೆ,: ಇಂದು (ಸೋಮವಾರ) ಬೆಳಗ್ಗೆ 10.00ಕ್ಕೆ ವಾಗೀಶ್ವರಿ ದುರ್ಗಾ ಹೋಮ, 1.00ಕ್ಕೆ ಶಿವಪೂಜೆ, 1.15ಕ್ಕೆ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ರಾತ್ರಿ 7.30ರಿಂದ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ನವದುರ್ಗೆ, ಶ್ರೀಶಾರದಾ

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಜಯದಶಮಿಯ ಸಡಗರ Read More »

ಶಿವಾನುಗ್ರಹದಿಂದ ದಸರಾ ಸಾಧ್ಯವಾಯ್ತು: ಜನಾರ್ದನ ಪೂಜಾರಿ

ಮಂಗಳೂರು: ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಮಂಗಳೂರು ದಸರಾ ಮಹೋತ್ಸವ ಆಯೋಜಿಸುವುದು ನಿಜಕ್ಕೂ ದೊಡ್ಡ ಸವಾಲಾಗಿತ್ತು. ಆದರೆ ದೇವರ ಇಚ್ಛೆಯೇ ಬೇರೆಯೇ ಇದ್ದು, ಶಿವಾನುಗ್ರಹದಿಂದ ಇದು ಸಾಧ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ಸಂಜೆ ದಸರಾ ಮಹೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಮಂಗಳೂರು ದಸರಾ ಮಹೋತ್ಸವವನ್ನು ಹಲವು ವರ್ಷಗಳಿಂದ ಶ್ರೀ ಗೋಕರ್ಣನಾಥ ದೇವರು ಚೆನ್ನಾಗಿ ಮುನ್ನಡೆಸಿಕೊಂಡು

ಶಿವಾನುಗ್ರಹದಿಂದ ದಸರಾ ಸಾಧ್ಯವಾಯ್ತು: ಜನಾರ್ದನ ಪೂಜಾರಿ Read More »

ಮಂಗಳೂರು ದಸರಾ ಸಂಸದರು, ಶಾಸಕರ ಭೇಟಿ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಮಂಗಳೂರು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಮಂಗಳೂರು ಮೇಯರ್ ದಿವಾಕರ್, ದೇವಳ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಟ್ರಸ್ಟಿಗಳಾದ ಪದ್ಮರಾಜ್, ಶೇಖರ್ ಪೂಜಾರಿ, ರವಿಶಂಕರ್ ಮಿಜಾರ್, ಅಭಿವೃದ್ಧಿ ಸಮಿತಿಯ ಹರಿಕೃಷ್ಣ ಬಂಟ್ವಾಳ್, ರಾಧಕೃಷ್ಣ, ಕಾರ್ಪೊರೇಟರ್

ಮಂಗಳೂರು ದಸರಾ ಸಂಸದರು, ಶಾಸಕರ ಭೇಟಿ Read More »

ಗುರು ಭಾವಚಿತ್ರ ಸಾಂಕೇತಿಕ ಪ್ರದಕ್ಷಿಣೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ‘ದಸರಾ ಮಹೋತ್ಸವ’ ಅಂಗವಾಗಿ ಈ ಬಾರಿ ದಸರಾ ಶೋಭಾಯಾತ್ರೆಯ ಬದಲು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲು ಎಂದು ದೇವಳ ಆಡಳಿತ ಮಂಡಳಿ ನಿರ್ಧರಿಸಿದೆ. ಕುದ್ರೋಳಿ ಕ್ಷೇತ್ರದಿಂದ ಅಕ್ಟೋಬರ್.26ರಂದು ಸಂಜೆ 6ಗಂಟೆಗೆ ನಾರಾಯಣ ಗುರು ಭಾವಚಿತ್ರವಿರುವ ಟ್ಯಾಬ್ಲೋ ಹೊರಡಲಿದ್ದು, ವಾಹನದಲ್ಲಿ ಸೀಮಿತ ಭಕ್ತಾದಿಗಳು ಮಾತ್ರ ಭಾಗವಹಿಸಲಿದ್ದಾರೆ. ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ಬಾಗ್, ಪಿವಿಎಸ್,

ಗುರು ಭಾವಚಿತ್ರ ಸಾಂಕೇತಿಕ ಪ್ರದಕ್ಷಿಣೆ Read More »

You cannot copy content of this page

Scroll to Top