ಇತರ

ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ

ರಾಜಕೀಯ ಕ್ಷೇತ್ರದಲ್ಲಿ ಇಂದು ಅಧಿಕಾರ  ಇದ್ದಾಗ ಮಾತ್ರ  ರಾಜಕಾರಣಿಗಳು ಜನಪ್ರಿಯತೆ ಗೌರವ ಪಡೆಯುತ್ತಾರೆ. ಎಷ್ಟೇ ದೊಡ್ಡ ರಾಜಕಾರಣಿಯಾದರೂ ಅವರಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೆ ಅವರನ್ನು ಯಾರೂ ಕೂಡ ನೆನಪಿಸುವುದಿಲ್ಲ, ಗೌರವಿಸುವುದಿಲ್ಲ. ಆದರೆ ರಾಜಕೀಯದಲ್ಲಿ ಇಂದು ತಾನು ಯಾವುದೇ ಅಧಿಕಾರ ಹೊಂದಿಲ್ಲದಿದ್ದರೂ, ತನ್ನ ಘನತೆ, ಆದರ್ಶ ವ್ಯಕ್ತಿತ್ವದಿಂದ ಇಂದಿಗೂ ಜನಸಮುದಾಯದಿಂದ ಗೌರವಿಸಲ್ಪಡುತ್ತಿರುವ ಓರ್ವ ಅಪೂರ್ವ ಮಾದರಿ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆ ನಿಂತವರು ಜನಾರ್ದನ ಪೂಜಾರಿಯವರು. ತನ್ನ ನೇರ ನಡೆನುಡಿ, ಶುದ್ಧ ಚಾರಿತ್ರ್ಯ, ಸತ್ಯ ಪ್ರಾಮಾಣಿಕತೆಯಿಂದ ರಾಜಕೀಯಕ್ಕೆ ಹೊಸ ಭಾಷ್ಯ […]

ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ Read More »

ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು

ಪೂಜ್ಯ ಗುರುವರ್ಯರು ಎರಡನೆಯ ಸಲ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿತ್ತು. ಅದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕುಡಿಯಲು ಶುದ್ಧವಾದ ಸಿಹಿನೀರು ದೊರೆಯುವುದಿಲ್ಲ ಎಂಬುದನ್ನು ಭಕ್ತರು ಶ್ರೀ ಗುರುಗಳ ಗಮನಕ್ಕೆ ತಂದರು. ಆಗ ಪೂಜ್ಯ ಗುರುಗಳು ಶ್ರೀ ಕ್ಷೇತ್ರದ ಆಗ್ನೇಯ ಭಾಗದಲ್ಲಿ ಒಂದು ಸ್ಥಳ ತೋರಿಸಿ ಅಲ್ಲಿ ಬಾವಿ ತೋಡಲು ಹೇಳುತ್ತಾರೆ. ಏನಾಶ್ಚರ್ಯ! ಪರಿಸರದಲ್ಲೆಲ್ಲಾ ಉಪ್ಪು ನೀರೆ ದೊರೆಯುತ್ತಿದ್ದರೂ, ಗುರುಗಳು ತೋರಿಸಿದ ಸ್ಥಳದಲ್ಲಿ ಕೆಲವೇ ಅಡಿ ಆಳದಲ್ಲಿ ಸಿಹಿನೀರಿನ ಸೆಲೆ ಸಿಕ್ಕಿದ್ದನ್ನು

ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು Read More »

2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 2019 ರ ಫೆಬ್ರವರಿಯಲ್ಲಿ ಜನಾರ್ದನ ಪೂಜಾರಿಯವರ ಸಂಕಲ್ಪ ಶಕ್ತಿಯಿಂದ ಶ್ರೀಕ್ಷೇತ್ರದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಸ್ವರ್ಣಶಿಖರ ಪ್ರತಿಷ್ಠೆಯಾಗಿ ಶ್ರಧ್ಧಾಭಕ್ತಿಯಿಂದ ಬ್ರಹ್ಮಕಲಶ ನಡೆದು ಶ್ರೀಕ್ಷೇತ್ರ ಮತ್ತಷ್ಟು ಮೆರುಗು ಪಡೆಯಿತು. ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಂದ ಇಂದು ಶ್ರೀ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇಂತಹ ಅಪೂರ್ವ ಸಾಧನೆ ಪೂಜಾರಿಯವರಂತಹ ಸಾಧಕರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಹಾಗೂ ಕ್ಷೇತ್ರದ ಭಕ್ತರ ಸೇವಾ ಮನೋಭಾವನೆಯಿಂದ

2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ Read More »

ಬಿಲ್ಲವ ಸಮಾಜದ ಹೊಸ ಮನ್ವಂತರಕ್ಕೆ ನಾಂದಿ

ಮಂಗಳೂರು : ಅಸ್ಪೃಶ್ಯತೆ ತುತ್ತ ತುದಿಯಲ್ಲಿದ್ದ ಆ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುಸಂಖ್ಯಾತರೆನಿಸಿಕೊಂಡ ಬಿಲ್ಲವರು ಮೇಲ್ವರ್ಗವರು ಎಂದೆನಿಸಿಕೊಂಡವರಿಂದ ನೋವು ಅವಮಾನಗಳನ್ನು ಅನುಭವಿಸಿ ರೋಸಿ ಹೋಗಿದ್ದರು… ಆ ಸಮುದಾಯದವರಿಂದ ಮಾರುದ್ದ ದೂರ ನಿಲ್ಲಬೇಕಾದ ಹೀನಾಯ ಸ್ಥಿತಿ… ದೇವಾಲಯ, ವಿದ್ಯಾ ಮಂದಿರಗಳಲ್ಲಿ ಪ್ರವೇಶವಿಲ್ಲದೆ ಅನುಭವಿಸುತ್ತಿದ್ದ ನರಕಯಾತನೆ… ನೋವಿನಿಂದ ಜರ್ಜರಿತರಾದ ಸಮಾಜದ ಹಿರಿಯರು ಶ್ರೀಮಾನ್ ಸಾಹುಕಾರ್ ಕೊರಗಪ್ಪನವರ ನೇತೃತ್ವದಲ್ಲಿ, ಆದಾಗಲೇ ಕೇರಳದಲ್ಲಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಯ ಜ್ಯೋತಿ ಬೆಳಗಿಸಿದ ಶ್ರೀ ನಾರಾಯಣಗುರುಗಳನ್ನು ಕೇರಳದಲ್ಲಿ ಭೇಟಿ ಮಾಡಿದರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಬಿಲ್ಲವರು

ಬಿಲ್ಲವ ಸಮಾಜದ ಹೊಸ ಮನ್ವಂತರಕ್ಕೆ ನಾಂದಿ Read More »

ಜಯ ಸಿ. ಸುವರ್ಣರು ಶತಮಾನ ಕಂಡ ಮಹಾನ್ ಸಮಾಜಸೇವಕ

ಮಂಗಳೂರು: ಜಯ ಸಿ. ಸುವರ್ಣರು ನಿಧನರಾದ ಸುದ್ದಿ ತಿಳಿದಾಗ ಅವರು ಮಾಡುತಿದ್ದ ಸೇವಾಕೈಂಕರ್ಯ ಮುಂದುವರಿಸುವವರು ಯಾರು ಎಂದು ಕಳವಳಗೊಂಡಿದ್ದೆ. ಜಯ ಸುವರ್ಣರು ಶತಮಾನ ಕಂಡಮಹಾನ್ ಸಮಾಜಸೇವಕ. ಅವರ ಆದರ್ಶವನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ಜಯ ಸಿ. ಸುವರ್ಣರಿಗೆ ಅವರ ಹುಟ್ಟೂರು ನಂದಿಕೂರು ಬಳಿಯ

ಜಯ ಸಿ. ಸುವರ್ಣರು ಶತಮಾನ ಕಂಡ ಮಹಾನ್ ಸಮಾಜಸೇವಕ Read More »

ಜಯ ಸಿ. ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕರೆ

ಪ್ರಚಲಿತ ದಿನಗಳಲ್ಲಿ ನಮ್ಮನ್ನು ಮೀರಿ ನಿಂತ ಬಹುದೊಡ್ಡ ವ್ಯಕ್ತಿ ಜಯ ಸಿ. ಸುವರ್ಣರು. ಅವರು ಮತ್ತು ಜನಾರ್ದನ ಪೂಜಾರಿ ಒಂದೇ ದೇಹದ ಎರಡು ಕೈಗಳಂತೆ ಸಮಾಜ ಕಟ್ಟಲು ಶ್ರಮಿಸಿದವರು. ಇವರಿಬ್ಬರ ಆದರ್ಶವನ್ನು ನಾವು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗುರುವಾರ ಕರ್ಮಯೋಗಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಬಿಲ್ಲವ ಮಹಾಮಂಡಲ ಮಾಜಿ ಅಧ್ಯಕ್ಷ

ಜಯ ಸಿ. ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕರೆ Read More »

ವೈಭವದ ಮಂಗಳೂರು ದಸರಾ

ಅಸ್ಪ್ರಶ್ಯತೆಯ ಮೃತ್ಯುಛಾಯೆಯ ಅಮಲಿನಲಿ,ಕನವರಿಸುತ್ತಿರಲು ಸಮಾಜ,ಒಂದೇ ಜಾತಿ ಒಂದೇ ಮತ ಒಂದೇ ದೇವರೆಂಬ,ಪವಿತ್ರ ಪರಿಕಲ್ಪನೆಯ ಮೂಲಮಂತ್ರದಲಿ,ಮನುಕುಲ ವಂದಿತಬ್ರಹ್ಮ ಜ್ಞಾನಿಯ ಶುದ್ದಹಸ್ತದಲಿ,ಅವಿರ್ಭವಿಸಿದ,ಲಿಂಗಸ್ವರೂಪಿಯಾಗಿತ್ರೀನೇತ್ರದಾರಿ,ಗೋಕರ್ಣನಾಥನೆಂಬ ನಾಮಾಂಕಿತದಲಿ,ಕುದುರೋಳಿ ಕ್ಷೇತ್ರದ ಪರಮಪುಣ್ಯ ನೆಲದಲಿ!ಕಾಲಾಂತರದಲಿ ಬದಲಾವಣೆಬಯಸಲು ಸಮಾಜ,ಒಂದೆಡೆ,ಬಡವರ ಬಂದುವೆನಿಸಿ,ಗುರು ತತ್ವಾದರ್ಶಗಳ ಹರಿಕಾರನಂತೆ ಗೋಚರಿಸಿ,ಶ್ರೀ ಕ್ಷೇತ್ರ ನವೀಕರಣರೂವಾರಿಯಾಗಿ ಮೂಡಿಬಂದರು,ಮೆಟ್ಟಿನಿಂತು,ವರ್ಣಭೇದದ ಕರಾಳ ಮುಖವನು!ಗುರುವಾಣಿಯಂತೆ,ಜಾತಿ-ಮತ ಭೇದ ಮರೆತು,ಸಮಾಜ ಒಂದಾಗಲು,ಕಲಾಮತೆಯ ಆರಾಧನೆಯ ನಾಡಹಬ್ಬ,ಕರಾವಳಿ ಸೀಮೆಗೇ,ಹೊನ್ನಕಲಶವೆಂಬತೆ ಭಾಸವಗುತ್ತಿಹುದು ಇಂದು,ವೈಭವದ ಮಂಗಳೂರು ದಸರಾ! ರಚನೆ : ಬಂಟ್ವಾಳ ಸಂತೋಷ್ ಪೂಜಾರಿ

ವೈಭವದ ಮಂಗಳೂರು ದಸರಾ Read More »

ಜಯ ಸಿ. ಸುವರ್ಣ ನಿಧನಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಸಂತಾಪ

ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ , ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ ನಿಧನಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಡಳಿತ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಬುಧವಾರ ಸಂತಾಪ ಸೂಚಕ ಸಭೆ ನಡೆಸಲಾಯಿತು. ಕ್ಷೇತ್ರದ ಅಧ್ಯಕ್ಷ ಎಚ್.ಎಸ್ ಸಾಯಿರಾಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಜಯ

ಜಯ ಸಿ. ಸುವರ್ಣ ನಿಧನಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಸಂತಾಪ Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯ.ಸಿ.ಸುವರ್ಣ ನಿಧನ

ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ. ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಮುಂಬೈ ಬಿಲ್ಲವ ಭವನದ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹತ್ತು ಹಲವಾರು ಕೊಡುಗೆಗಳನ್ನು ನೀಡಿದವರು. ಕೇಂದ್ರದ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯ.ಸಿ.ಸುವರ್ಣ ನಿಧನ Read More »

ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆವಿರ್ಭವಿಸಿದ ಸರ್ವಶಕ್ತಿಗಳು ಭಕ್ತರ ಇಷ್ಟಾರ್ಥ ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಶರಣು ಬಂದವರನ್ನು ಸದಾ ರಕ್ಷಿಸುತ್ತಿರುವ ಶ್ರೀ ಗೋಕರ್ಣನಾಥ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಪಾರ್ಥಸಾರಥಿಯಾದ ಶ್ರೀ ಕೃಷ್ಣ, ಶ್ರೀ ಶನೀಶ್ವರ, ಶ್ರೀ ಕಾಳಭೈರವ, ಶ್ರೀ ಅಂಜನೇಯ, ಶ್ರೀ ಶಿರ್ಡಿ ಸಾಯಿಬಾಬಾ, ನವಗ್ರಹ ಹಾಗೂ ಈ ಸಕಲ ಶಕ್ತಿಗಳನ್ನು ಇಲ್ಲಿ ನೆಲೆಗೊಳಿಸಿದ ಪೂಜ್ಯ ಗುರುವರ್ಯರ ಕೃಪಾಕಟಾಕ್ಷದಿಂದಾಗಿ, ಶ್ರದ್ಧಾಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನು ಅನುಗ್ರಹಿಸುವ ಅಪೂರ್ವ ಶಕ್ತಿ ಈ ಕ್ಷೇತ್ರದಲ್ಲಿದೆ. ವೈದ್ಯರಿಂದಲೂ

ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ Read More »

You cannot copy content of this page

Scroll to Top