
ಪೂಜ್ಯ ಗುರುವರ್ಯರು ಎರಡನೆಯ ಸಲ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿತ್ತು. ಅದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕುಡಿಯಲು ಶುದ್ಧವಾದ ಸಿಹಿನೀರು ದೊರೆಯುವುದಿಲ್ಲ ಎಂಬುದನ್ನು ಭಕ್ತರು ಶ್ರೀ ಗುರುಗಳ ಗಮನಕ್ಕೆ ತಂದರು. ಆಗ ಪೂಜ್ಯ ಗುರುಗಳು ಶ್ರೀ ಕ್ಷೇತ್ರದ ಆಗ್ನೇಯ ಭಾಗದಲ್ಲಿ ಒಂದು ಸ್ಥಳ ತೋರಿಸಿ ಅಲ್ಲಿ ಬಾವಿ ತೋಡಲು ಹೇಳುತ್ತಾರೆ. ಏನಾಶ್ಚರ್ಯ! ಪರಿಸರದಲ್ಲೆಲ್ಲಾ ಉಪ್ಪು ನೀರೆ ದೊರೆಯುತ್ತಿದ್ದರೂ, ಗುರುಗಳು ತೋರಿಸಿದ ಸ್ಥಳದಲ್ಲಿ ಕೆಲವೇ ಅಡಿ ಆಳದಲ್ಲಿ ಸಿಹಿನೀರಿನ ಸೆಲೆ ಸಿಕ್ಕಿದ್ದನ್ನು ಕಂಡ ಭಕ್ತರು, ಶ್ರೀ ಗುರುಗಳ ಕಾರಣಿಕ ಶಕ್ತಿಯನ್ನು ಕಂಡು ಬೆರಗಾಗುತ್ತಾರೆ. ಅಂದು ನಡೆದ ಪವಾಡದಿಂದ ಪೂಜ್ಯ ಗುರುವರ್ಯರ ಹಾಗೂ ಈ ಪುಣ್ಯ ಸ್ಥಳ ಕುದ್ರೋಳಿಯ ಮಹಿಮೆಯನ್ನು ಭಕ್ತರು ಕಣ್ಣಾರೆ ಕಂಡು ಪುಳಕಿತರಾದರು. ಗುರುಗಳ ಮೇಲಿನ ಭಕ್ತಿ ಇಮ್ಮಡಿಯಾಯಿತು.
1 thought on “ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು”
ಜೈ ಗುರು ದೇವ..