ಅಕ್ಟೋಬರ್ 19, 2020

ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆವಿರ್ಭವಿಸಿದ ಸರ್ವಶಕ್ತಿಗಳು ಭಕ್ತರ ಇಷ್ಟಾರ್ಥ ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಶರಣು ಬಂದವರನ್ನು ಸದಾ ರಕ್ಷಿಸುತ್ತಿರುವ ಶ್ರೀ ಗೋಕರ್ಣನಾಥ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಪಾರ್ಥಸಾರಥಿಯಾದ ಶ್ರೀ ಕೃಷ್ಣ, ಶ್ರೀ ಶನೀಶ್ವರ, ಶ್ರೀ ಕಾಳಭೈರವ, ಶ್ರೀ ಅಂಜನೇಯ, ಶ್ರೀ ಶಿರ್ಡಿ ಸಾಯಿಬಾಬಾ, ನವಗ್ರಹ ಹಾಗೂ ಈ ಸಕಲ ಶಕ್ತಿಗಳನ್ನು ಇಲ್ಲಿ ನೆಲೆಗೊಳಿಸಿದ ಪೂಜ್ಯ ಗುರುವರ್ಯರ ಕೃಪಾಕಟಾಕ್ಷದಿಂದಾಗಿ, ಶ್ರದ್ಧಾಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನು ಅನುಗ್ರಹಿಸುವ ಅಪೂರ್ವ ಶಕ್ತಿ ಈ ಕ್ಷೇತ್ರದಲ್ಲಿದೆ. ವೈದ್ಯರಿಂದಲೂ […]

ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ Read More »

ಶೋಷಿತರಿಗೆ, ದುರ್ಬಲರಿಗೆ, ಶೂದ್ರರೆನಿಸಿದವರಿಗೆ ಆತ್ಮಸ್ಥೈರ್ಯ ಗೌರವದ ಬದುಕು ನೀಡಿದ ತಾಣ ಶ್ರೀ ಗೋಕರ್ಣನಾಥ ಕ್ಷೇತ್ರ

ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯವಾದ ಪರಿವರ್ತನೆಯ ಗಾಳಿ ಬೀಸುತ್ತಿದೆಯೆಂದಾದರೆ ಅದಕ್ಕೆ ಕಾರಣ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಆ ಮಹಾ ಪುರುಷರಿಂದಲೇ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯಗಳು. ಧಾರ್ಮಿಕ ಶೋಷಣೆ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆಯ ಕರಾಳ ಬದುಕು, ಗುಲಾಮಗಿರಿತನ ಇವುಗಳನ್ನೆಲ್ಲಾ ಮೆಟ್ಟಿ ನಿಂತು. ಭಗವಂತನ ಸೃಷ್ಠಿಯಲ್ಲಿ ಮಾನವರೆಲ್ಲರೂ ಸಮಾನರು ಎಂದು ಸಾರಿ, ಈ ವರ್ಗಕ್ಕೆ ದೇವರ ದರ್ಶನ ಮಾಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಅಂದು ಶ್ರೀ ನಾರಾಯಣ ಗುರುಗಳು ಬಂದು ದೇವಾಲಯ ಸ್ಥಾಪನೆಯಂತಹ ಧಾರ್ಮಿಕ

ಶೋಷಿತರಿಗೆ, ದುರ್ಬಲರಿಗೆ, ಶೂದ್ರರೆನಿಸಿದವರಿಗೆ ಆತ್ಮಸ್ಥೈರ್ಯ ಗೌರವದ ಬದುಕು ನೀಡಿದ ತಾಣ ಶ್ರೀ ಗೋಕರ್ಣನಾಥ ಕ್ಷೇತ್ರ Read More »

ಉದ್ಘಾಟನೆಗೆ ಕೋವಿಡ್ ವಾರಿಯರ್ ಡಾ ಆರತಿ ಕೃಷ್ಣ ಆಯ್ಕೆ

ಸುಮಾರು 6 ತಿಂಗಳಿಂದೀಚೆಗೆ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾದರು. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು. ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.24ರಿಂದ ಆರಂಭವಾಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು

ಉದ್ಘಾಟನೆಗೆ ಕೋವಿಡ್ ವಾರಿಯರ್ ಡಾ ಆರತಿ ಕೃಷ್ಣ ಆಯ್ಕೆ Read More »

ನಮ್ಮ ದಸರಾ ನಮ್ಮ ಸುರಕ್ಷೆ

ನಮ್ಮ ಸುರಕ್ಷತೆ ನಾವೇ ಪಾಲಿಸೋಣ! ಎಲ್ಲರಿಗೂ ತಿಳಿದಂತೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಕೋವಿಡ್ ಆರೋಗ್ಯ ವಿಷಮ ಸ್ಥಿತಿಯ ಹಿನ್ನೆಲೆ ದೇವಸ್ಥಾನದ ವಿಧಿ ವಿಧಾನಗಳ ಸಂಪ್ರದಾಯಂತೆ ಮಾತ್ರ ನಡೆಯಲಿದೆ. ನಮ್ಮ ದಸರಾ- ನಮ್ಮ ಸುರಕ್ಷೆ* ಘೋಷವಾಕ್ಯದೊಂದಿಗೆ ನಡೆಯುವ ಉತ್ಸವವಾಗಿರುವುದರಿಂದ ಕ್ಷೇತ್ರದ ಭಕ್ತಾಧಿಗಳು ಈ ಕೆಳಗಿನ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗೋಣ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 6 ವರ್ಷದ ಒಳಗಿನ ಮಕ್ಕಳನ್ನು 10 ದಿನದ ಉತ್ಸವಕ್ಕೆ ಬರುವುದನ್ನು

ನಮ್ಮ ದಸರಾ ನಮ್ಮ ಸುರಕ್ಷೆ Read More »

ಮಂಗಳೂರು ದಸರಾಕ್ಕೆ ಚಾಲನೆ

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17ರಿಂದ 26ರ ತನಕ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಸಾಂಪ್ರದಾಯಿಕವಾಗಿ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ಬೆಳಗ್ಗೆ ಗುರು ಪ್ರಾರ್ಥನೆ, ನವಕಲಶಾಭಿಷೇಕ, ಕಲಶ ಸ್ಥಾಪನೆ, ನವದುರ್ಗೆ ಮತ್ತು ಶಾರದಾ ಪ್ರತಿಷ್ಠಾಪನೆ, ಪುಷ್ಪಾಲಂಕಾರ ಮಹಾಪೂಜೆ, ಭಜನಾ ಕಾರ್ಯಕ್ರಮ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನೆರವೇರಿತು. ಆರಂಭದಲ್ಲಿ ಶಾರದಾಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ಬಂದ ಬಳಿಕ ಕ್ಷೇತ್ರದ ಗೋಕರ್ಣನಾಥ

ಮಂಗಳೂರು ದಸರಾಕ್ಕೆ ಚಾಲನೆ Read More »

ಮಂಗಳೂರು ದಸರಾಕ್ಕೆ ಹುಲಿವೇಷದ ಮೆರುಗು

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 17.10.2020 ಶನಿವಾರ ನಡೆದ ಮಂಗಳೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಹುಲಿ ವೇಷ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಶಾರದಾ ಪ್ರತಿಷ್ಠೆಯ ಸಂದರ್ಭ ಹುಲಿ ಕುಣಿತ ವಿವಿಧ ಕಸರತ್ತುಗಳಿಂದ ರಂಜಿಸಿತು. ಕೆಲವು ಹುಲಿವೇಷಗಳ ಮೇಲೆ ತುಳು ಲಿಪಿ ಬರಹ ಎಲ್ಲರ ಗಮನ ಸೆಳೆದಿತ್ತು. ಕೊರೊನಾ ಕಾರಣವೊಡ್ಡಿ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಈ ಹಿಂದೆ ಅನುಮತಿ ನೀಡಿರಲಿಲ್ಲ ಆದರೆ ಹುಲಿವೇಷ ಕುಣಿತ ಸೇವೆಗೆ ಅವಕಾಶ ನೀಡಬೇಕು ಎಂದು ಕರಾವಳಿಯ ವಿವಿಧ ಸಂಘಟನೆಗಳು ದ.ಕ.

ಮಂಗಳೂರು ದಸರಾಕ್ಕೆ ಹುಲಿವೇಷದ ಮೆರುಗು Read More »

ಮಂಗಳೂರು ದಸರಾ ಉದ್ಘಾಟನೆಯ ಸುಯೋಗ : ಡಾ| ಆರತಿ ಕೃಷ್ಣ

ಮಂಗಳೂರು : ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕುದ್ರೋಳಿಯಲ್ಲಿ ಹಲವಾರು ಕ್ರಾಂತಿಕಾರಿ ಹೆಜ್ಜೆಗಳನ್ನು ಇರಿಸಿ ಮಹಿಳೆಯರಿಗೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ಅವಕಾಶ ಕಲ್ಪಿಸಿದ್ದು, ಕ್ಷೇತ್ರವು ದೇಶ-ವಿದೇಶಗಳಲ್ಲೂ ಪ್ರಸಿದ್ದಿ ಪಡೆದಿದೆ. ಕೊರೊನಾ ಸಂದರ್ಭ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನಿಜಕ್ಕೂ ತುಂಬಾ ಖುಷಿ ತಂದಿದೆ. ಕೊರೋನಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೊರೊನಾ ವಾರಿಯರ್ ಗಳಿಗೆ ಗಳಿಗೆ ಹೆಚ್ಚು ನೆರವಾಗಿದ್ದೆ, ಅವರ ಪ್ರಾರ್ಥನಾ

ಮಂಗಳೂರು ದಸರಾ ಉದ್ಘಾಟನೆಯ ಸುಯೋಗ : ಡಾ| ಆರತಿ ಕೃಷ್ಣ Read More »

ಮಂಗಳೂರು ದಸರಾದ ಮೆರುಗು ಹೆಚ್ಚಿಸಿದ ಶಿಸ್ತುಬದ್ಧ ಸ್ವಯಂಸೇವಕರು

ವಿವಿಧ ಸಂಘಟನೆಯ ಸ್ವಯಂ ಸೇವಕರು ಕ್ಷೇತ್ರದ ನಿಯಮಗಳಿಗೆ ಅನುಗುಣವಾಗಿ ಮಂಗಳೂರು ದಸರಾ ಶಿಸ್ತುಬದ್ದವಾಗಿ ಕೋವಿಡ್ ಆರೋಗ್ಯ ವಿಷಮ ಸ್ಥತಿಯಲ್ಲಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷ ವಾಕ್ಯದಡಿ ನಡೆಯುವ ಮಂಗಳೂರು ದಸರಾದಲ್ಲಿ ಸ್ವಯಂ ಸೇವಕರ ಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಕ್ಷೇತ್ರದ ಭಕ್ತಾದಿಗಳು ಕ್ಷೇತ್ರದ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಭಕ್ತಾದಿಗಳಿಗೆ ವಿನಮ್ರವಾಗಿ ತಿಳಿಸಿ ದಸರಾದ ಮೊದಲ ದಿನದ ಯಶಸ್ಬಿಗೆ ಸಹಕರಿಸಿದರು.ನಿರೀಕ್ಷೆಗೂ ಮೀರಿ ಆಗಮಿಸಿದ ಸ್ವಯಂಸೇವಕರ ಕಾರ್ಯವನ್ನು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಆರ್.ಪದ್ಮಾರಾಜ್ ಶ್ಲಾಘಿಸಿದರು. ಯುವವಾಹಿನಿ ಮಂಗಳೂರು

ಮಂಗಳೂರು ದಸರಾದ ಮೆರುಗು ಹೆಚ್ಚಿಸಿದ ಶಿಸ್ತುಬದ್ಧ ಸ್ವಯಂಸೇವಕರು Read More »

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದಿಂದ ಅನ್ನದಾನ ಸೇವೆ

ಸಾಮಾಜಿಕ‌ ಜಾಲತಾಣದಲ್ಲಿ‌ ಕಾರ್ಯನಿರ್ವಹಿಸುತ್ತಿರುವ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ವತಿಯಿಂದ ಶ್ರೀಕ್ಷೇತ್ರ ಕುದ್ರೋಳಿ ನವರಾತ್ರಿ ಮಹೋತ್ಸವ ಪ್ರಯುಕ್ತ ಅನ್ನದಾನ ಸೇವೆಗೆ ಊರ ಪರವೂರ‌ ಭಕ್ತರ ಸಹಕಾರದಿಂದ ಒಂದುವರೆ ಲಕ್ಷ ರೂಪಾಯಿ ನೀಡಲಾಯಿತು. ಕ್ಷೇತ್ರಾಡಳಿತ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿ ರವಿಶಂಕರ್ ಮಿಜಾರ್, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ದಿನೇಶ್ ಸುವರ್ಣ ರಾಯಿ, ರಕ್ಷಿತ್ ಬಿರ್ವ, ಕುಸುಮಾಕರ್ ಕುಂಪಲ,ವಿಜಯ್ ಅಮ್ಟಾಡಿ, ನಳಿನಿ ಬಿಸಿರೋಡ್, ರವಿ ಕೊಂಡಾಣ, ಪ್ರವೀಣ್ ಕಿರೋಡಿ, ಸಂತೋಷ್,ನಾಗೇಶ್ ನೈಬೇಲು,

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದಿಂದ ಅನ್ನದಾನ ಸೇವೆ Read More »

You cannot copy content of this page

Scroll to Top