ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಲ್ಬಂ ಸಾಂಗ್ ಅನ್ನು ನವರಾತ್ರಿಯ ಐದನೇ ದಿನವಾದ ಬುಧವಾರ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಬಿಡುಗಡೆಗೊಳಿಸಿದರು.
ಕ್ಷೇತ್ರಾಡಳಿತ ಮಂಡಳಿ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮಾರಾಜ್ ಆರ್., ಗೋಪಾಲಕೃಷ್ಣ ಕುಂದರ್ ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.

ಎಕ್ಕಾರಿನ ಉದಯೋನ್ಮುಖ ಹಾಡುಗಾರ್ತಿ ಗ್ರೀಷ್ಮಾ ಕಟೀಲ್ ಅವರ ಕಂಠದಲ್ಲಿ ಮೂಡಿಬಂದ ಹಾಡಿಗೆ ಯಶವಂತ ಬೊಳೂರು ಸಾಹಿತ್ಯ ಬರೆದಿದ್ದಾರೆ. ಸಂಗೀತ ಕೆ.ರವಿಶಂಕರ್, ಸಂಕಲನ ಕಾರ್ತಿಕ್ ಕಾಜಿಲ, ರೆಕಾರ್ಡಿಂಗ್ ಸಿನಾಯ್ ವಿ.ಜೋಸೆಫ್ ಹಾಗೂ ಸಂದೀಪ್ ಆರ್.ಬಲ್ಲಾಲ್ ಅವರದ್ದು. ಮುನ್ನಾದಾಸ್, ರಶ್ಮಿ ಸಿ.ಕರ್ಕೇರಾ, ಗೋಪಾಲಕೃಷ್ಣ ಕುಂದರ್, ಸುರೇಶ್ ಕುಮಾರ್ ಹಾಗೂ ವಿಕ್ರಮ್ ಸುವರ್ಣ ಹಾಡು ಬಿಡುಗಡೆಗೆ ಸಹಕಾರ ನೀಡಿದರು. ಈ ಹಾಡು ಗ್ರೀಷ್ಮಾ ಕಟೀಲ್ ಅವರ ಯೂಟ್ಯೂಬ್ ಚಾನೆಲ್ https://youtu.be/pygQjF5U2DU ನಲ್ಲಿ ಲಭ್ಯವಿದೆ.