ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆವಿರ್ಭವಿಸಿದ ಸರ್ವಶಕ್ತಿಗಳು ಭಕ್ತರ ಇಷ್ಟಾರ್ಥ ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಶರಣು ಬಂದವರನ್ನು ಸದಾ ರಕ್ಷಿಸುತ್ತಿರುವ ಶ್ರೀ ಗೋಕರ್ಣನಾಥ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಪಾರ್ಥಸಾರಥಿಯಾದ ಶ್ರೀ ಕೃಷ್ಣ, ಶ್ರೀ ಶನೀಶ್ವರ, ಶ್ರೀ ಕಾಳಭೈರವ, ಶ್ರೀ ಅಂಜನೇಯ, ಶ್ರೀ ಶಿರ್ಡಿ ಸಾಯಿಬಾಬಾ, ನವಗ್ರಹ ಹಾಗೂ ಈ ಸಕಲ ಶಕ್ತಿಗಳನ್ನು ಇಲ್ಲಿ ನೆಲೆಗೊಳಿಸಿದ ಪೂಜ್ಯ ಗುರುವರ್ಯರ ಕೃಪಾಕಟಾಕ್ಷದಿಂದಾಗಿ, ಶ್ರದ್ಧಾಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನು ಅನುಗ್ರಹಿಸುವ ಅಪೂರ್ವ ಶಕ್ತಿ ಈ ಕ್ಷೇತ್ರದಲ್ಲಿದೆ. ವೈದ್ಯರಿಂದಲೂ …