ಮಂಗಳೂರು: ಇಂದು (24.10.2020 ಶನಿವಾರ) ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನ್ನ ಪ್ರಸಾದವನ್ನು ಸ್ವೀಕರಿಸಿದವರ ಸಂಖ್ಯೆ 10,000 ಕ್ಕೂ ಮೀರಿದೆ. ಅಚ್ಚುಕಟ್ಟುತನ ಶುಚಿ ರುಚಿ ಸುರಕ್ಷತೆ, ಶಿಸ್ತಿನ ಸಯಂಸೇವಕರ ನಿರಂತರ ಸೇವೆ ಇಂದು ಕೂಡ ಕಂಡು ಬಂತು. ಇಲ್ಲಿನ ಸ್ವಯಂ ಸೇವಕರ ಶ್ರಮ ಸುಸಜ್ಜಿತ ವ್ಯವಸ್ಥೆ ಕ್ಷೇತ್ರದ ಭಕ್ತಾದಿಗಳನ್ನು ಕೋವಿಡ್ ನ ಆರೋಗ್ಯದ ವಿಷಮ ಸ್ಥಿತಿಯಲ್ಲಿ ಕೂಡ ಶ್ರೀ ಕ್ಷೇತ್ರದ ಕಡೆ ಭಕ್ತರನ್ನು ಆಕರ್ಷಿಸುತ್ತಿದೆ.
