ನಮ್ಮ ಸುರಕ್ಷತೆ ನಾವೇ ಪಾಲಿಸೋಣ!
ಎಲ್ಲರಿಗೂ ತಿಳಿದಂತೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಕೋವಿಡ್ ಆರೋಗ್ಯ ವಿಷಮ ಸ್ಥಿತಿಯ ಹಿನ್ನೆಲೆ ದೇವಸ್ಥಾನದ ವಿಧಿ ವಿಧಾನಗಳ ಸಂಪ್ರದಾಯಂತೆ ಮಾತ್ರ ನಡೆಯಲಿದೆ.

- ನಮ್ಮ ದಸರಾ- ನಮ್ಮ ಸುರಕ್ಷೆ* ಘೋಷವಾಕ್ಯದೊಂದಿಗೆ ನಡೆಯುವ ಉತ್ಸವವಾಗಿರುವುದರಿಂದ ಕ್ಷೇತ್ರದ ಭಕ್ತಾಧಿಗಳು ಈ ಕೆಳಗಿನ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗೋಣ.
- ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 6 ವರ್ಷದ ಒಳಗಿನ ಮಕ್ಕಳನ್ನು 10 ದಿನದ ಉತ್ಸವಕ್ಕೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು.. ಮಾಸ್ಕ್ ಇಲ್ಲದವರಿಗೆ ಪ್ರವೇಶ ಕಡ್ಡಾಯ ನಿಷೇಧ.
- ದೇವಸ್ಥಾನ ಪ್ರವೇಶ ಮೊದಲು ಥರ್ಮಲ್ ಸ್ಕ್ಯಾನ್ ಮಾಡಲಾಗುವುದು. ಜ್ವರ, ಶೀತ ಇದ್ದವರು ದೇವಳ ಪ್ರವೇಶ ನಿಷೇಧಿಸಲಾಗಿದೆ. ಒಂದು ವೇಳೆ ಥರ್ಮಲ್ ಸ್ಕ್ಯಾನ್ ವೇಳೆ ಟೆಂಪರೇಚರ್ ಹೆಚ್ಚು ಇದ್ದರೆ ಅವರಿಗೆ ದೇವಳ ಪ್ರವೇಶಕ್ಕೆ ಅನುಮತಿ ಇಲ್ಲ.
- ದೇವರ ದರ್ಶನವನ್ನು ಅಂತರ ಕಾಯ್ದುಕೊಂಡೇ ಮಾಡತಕ್ಕದ್ದು.
- ಗುಂಪು ಸೇರಿಕೊಂಡು ಬರುವುದು ಬೇಡ. ನಮ್ಮೊಳಗೆ ಇರಲಿ ಸಾಮಾಜಿಕ ಅಂತರ.
- ದೇವಸ್ಥಾನದ ಆವರಣ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ಜಾಗದಲ್ಲಿ ಮೊಬೈಲ್‌ನಲ್ಲಿ ಸೆಲ್ಫಿ ಅಥವಾ ಫೋಟೋ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಹಿರಿಯರನ್ನು ಗೌರವಿಸುವ ಸಂಪ್ರದಾಯ ನಮ್ಮದು. ಆದ್ದರಿಂದ ಉತ್ಸವಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಅಡೆ ತಡೆ ಆಗದಂತೆ ಅವರಿಗೆ ಮೊದಲ ಪ್ರಾಶಸ್ತ್ಯ ನೀಡೋಣ.
- ಪಾರ್ಕಿಂಗ್ ಸ್ಥಳವಾಗಲಿ, ಸಂತೆ, ಅಂಗಡಿ ಪ್ರದೇಶಗಳಲ್ಲಿ ಗುಂಪು ಸೇರದೆ ಸಾವಕಾಶವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ದಸರಾ ನಮ್ಮ ಸುರಕ್ಷೆ ಯನ್ನು ಯಶಸ್ವಿಗೊಳಿಸೋಣ.
- ಉತ್ಸವಕ್ಕೆ ಬರುವ ಭಕ್ತಾಧಿಗಳು ಮೂರ್ತಿಗಳನ್ನು ಸ್ಪರ್ಶ ಮಾಡದೆ ಸಹಕರಿಸಬೇಕು.
- 60 ವರ್ಷದ ಮೇಲ್ಪಟ್ಟವರು, ಅನಾರೋಗ್ಯ ಪೀಡಿತರು ಈ ವರ್ಷದ ಮಟ್ಟಿಗೆ ಮನೆಯಲ್ಲೇ ಕುಳಿತು ದೇವರ ದರ್ಶನ ಪಡೆದುಕೊಳ್ಳಬೇಕು. ದರ್ಶನ ವ್ಯವಸ್ಥೆಯನ್ನು ಟಿ.ವಿ, ಆನ್‌ಲೈನ್ ಮೂಲಕ ಮಾಡಲಾಗುವುದು. ಜತೆಗೆ ಇವರ ಪರವಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗುವುದು.
- ಪ್ರಸಾದ ವಿತರಣೆಗೆ ದೇವಳದ ಗ್ಲಾಸ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.
- ಮಧ್ಯಾಹ್ನದ ಮಹಾಪೂಜೆ ಬಳಿಕ 2.30ರ ತನಕ ದೇವಸ್ಥಾನದ ಹೊರಹೋಗುವ ಗೇಟಿನಲ್ಲಿ ಹಾಳೆಯ ಬೌಲ್‌ನಲ್ಲಿ ಅನ್ನಪ್ರಸಾದ ವಿತರಿಸಲಾಗುವುದು. ಆದರೆ ಯಾರೂ ಕೂಡ ತಟ್ಟೆಯನ್ನು ಸಿಕ್ಕಸಿಕ್ಕಲ್ಲಿ ಬಿಸಾಡದೇ ಡಸ್ಟ್‌ಬಿನ್‌ಗೆ ಹಾಕಬೇಕು.
- ದೇವಳ ಸುತ್ತಮುತ್ತ ಯಾವುದೇ ರೀತಿಯ ಗಲೀಜಿಗೆ ಅವಕಾಶ ನೀಡದೆ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು.
- ಸ್ವಯಂ ಸೇವಕರು ನೀಡುವ ಪ್ರತಿಯೊಂದು ಮಾರ್ಗದರ್ಶನವನ್ನು ನಮ್ಮ ಸುರಕ್ಷೆಯ ದೃಷ್ಟಿಯಿಂದ ಪ್ರೀತಿಯಿಂದ ಪಾಲಿಸೋಣ.
- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ಮಾಡಲಾಗುತ್ತಿದ್ದು, ಮನೆಯಲ್ಲೇ ಕುಳಿತು ಆಸ್ವಾಧಿಸಬಹುದು.

ಹೆಚ್ಚಿನ ಮಾಹಿತಿಗೆ: ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ( 94482 83999) ಅಥವಾ ದೇವಳ ಕಚೇರಿ (0824-2983040)ಯನ್ನು ಸಂಪರ್ಕಿಸಬಹುದು.