ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆವಿರ್ಭವಿಸಿದ ಸರ್ವಶಕ್ತಿಗಳು ಭಕ್ತರ ಇಷ್ಟಾರ್ಥ ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಶರಣು ಬಂದವರನ್ನು ಸದಾ ರಕ್ಷಿಸುತ್ತಿರುವ ಶ್ರೀ ಗೋಕರ್ಣನಾಥ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಪಾರ್ಥಸಾರಥಿಯಾದ ಶ್ರೀ ಕೃಷ್ಣ, ಶ್ರೀ ಶನೀಶ್ವರ, ಶ್ರೀ ಕಾಳಭೈರವ, ಶ್ರೀ ಅಂಜನೇಯ, ಶ್ರೀ ಶಿರ್ಡಿ ಸಾಯಿಬಾಬಾ, ನವಗ್ರಹ ಹಾಗೂ ಈ ಸಕಲ ಶಕ್ತಿಗಳನ್ನು ಇಲ್ಲಿ ನೆಲೆಗೊಳಿಸಿದ ಪೂಜ್ಯ ಗುರುವರ್ಯರ ಕೃಪಾಕಟಾಕ್ಷದಿಂದಾಗಿ, ಶ್ರದ್ಧಾಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನು ಅನುಗ್ರಹಿಸುವ ಅಪೂರ್ವ ಶಕ್ತಿ ಈ ಕ್ಷೇತ್ರದಲ್ಲಿದೆ.

ವೈದ್ಯರಿಂದಲೂ ಗುಣಪಡಿಸಲಾಗದ ಮಾರಕ ಕಾಯಿಲೆಗಳು ಈ ಕ್ಷೇತ್ರಕ್ಕೆ ಶರಣು ಬಂದಾಗ ಗುಣಮುಖವಾದ ಅನೇಕ ನಿದರ್ಶನಗಳು ಇಲ್ಲಿದೆ. ಮದುವೆಯಾಗದ ಯುವತಿಯರು ಈ ಕ್ಷೇತ್ರದಲ್ಲಿ ಬಂದು ಭಕ್ತಿಯಿಂದ ಬೇಡಿದಾಗ ವಿವಾಹವಾದ, ಉದ್ಯೋಗ, ವ್ಯಾಪಾರ, ರಾಜಕೀಯ ಹೀಗೆ ನಾನಾ ತರದ ಸಮಸ್ಯೆಗಳು ಈ ಕ್ಷೇತ್ರದ ಮಹಿಮೆಯಿಂದ ಪರಿಹಾರವಾಗಿ, ಇಲ್ಲಿಯ ಭಕ್ತರು ಜೀವನದಲ್ಲಿ ಉನ್ನತಿ ಸಾಧಿಸಿದ ಹಲವಾರು ಘಟನೆಗಳು ನಿರಂತರ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸಿ ಉದ್ಯಮ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದು ಇಂದು ಕ್ಷೇತ್ರದ ಪರಮ ಭಕ್ತರಾದ ಅದೆಷ್ಟೋ ಮಂದಿ ಶ್ರೀ ಕ್ಷೇತ್ರದ ಮಹಿಮೆಯನ್ನು ಕಂಡು ಧನ್ಯತೆ ಪಡೆದಿದ್ದಾರೆ. ಅಂತಹ ಅನನ್ಯ, ಅದ್ಭುತ ಮಹಿಮೆ ಈ ಕ್ಷೇತ್ರಕ್ಕಿದೆ. ಈ ಕ್ಷೇತ್ರಕ್ಕೆ ಬಂದು ಇಲ್ಲಿರುವ ಭಗವಂತನಿಗೆ ಶ್ರದ್ಧಾಭಕ್ತಿಯಿಂದ ಶರಣು ಬಂದಾಗ, ಪ್ರತಿಯೊಬ್ಬ ಭಕ್ತರ ಜೀವನದಲ್ಲೂ ಪವಾಡ ಸದೃಶ ಬದಲಾವಣೆ ಸಾಧ್ಯ. ಕಷ್ಟಗಳೆಲ್ಲಾ ಮಂಜಿನಂತೆ ಕರಗಿ, ಜೀವನದಲ್ಲಿ ಶಾಂತಿ, ನೆಮ್ಮದಿ, ಉನ್ನತಿಯನ್ನು ಕರುಣಿಸುತ್ತಿರುವ ಕಾರಣಿಕ ಶಕ್ತಿಯಿರುವ ತಾಣವೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ. ನೀವೂ ಬನ್ನಿರಿ… ಶ್ರೀ ಕ್ಷೇತ್ರದ ಸನ್ನಿಧಾನಕ್ಕೆ ಬಂದು ಶ್ರೀ ಗೋಕರ್ಣನಾಥನ, ಮಾತೆ ಅನ್ನಪೂರ್ಣೇಶ್ವರಿಯ, ಶ್ರೀ ಗುರುವರ್ಯರ ಹಾಗೂ ಇಲ್ಲಿರುವ ಸಕಲ ಶಕ್ತಿಗಳ ಕೃಪೆಗೆ ಪಾತ್ರರಾಗಿರಿ.

ಪೂಜ್ಯ ನಾರಾಯಣ ಗುರುವರ್ಯರು ಕರುಣಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರದ ಕಾರಣದಿಂದಾಗಿಯೇ ಇಂದು ಬಿಲ್ಲವರು ಸ್ವಾಭಿಮಾನದಿಂದ, ಇತರ ಜನಾಂಗದೊಂದಿಗೆ ಸರಿಸಮಾನವಾಗಿ ತಲೆ ಎತ್ತಿ ನಿಲ್ಲಲು ಸಾಧ್ಯವಾಯಿತು. ಬಿಲ್ಲವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯಹೀಗೆ ವಿವಿಧ ಕ್ಷೇತ್ರಗಳಲ್ಲಿ ಸರ್ವೋತೋಮುಖ ಅಭಿವೃದ್ಧಿಯ ಪಥದತ್ತ ಸಾಗಿ, ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಶ್ರೀ ಗೋಕರ್ಣನಾಥ ಕ್ಷೇತ್ರವಿಂದು ಬಿಲ್ಲವರು ಸೇರಿದಂತೆ ಅಸ್ಪøಶ್ಯರೆನಿಸಿಕೊಂಡವರ ಸ್ಪೂರ್ತಿ, ಪ್ರೇರಣೆ, ಸ್ವಾಭಿಮಾನದ ಸೆಲೆಯಾಗಿ, ಸಮುದಾಯದ ಉದ್ಧಾರದ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಿದೆ.

1 thought on “ಶರಣು ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರ”

Leave a Comment

Your email address will not be published. Required fields are marked *

You cannot copy content of this page

Scroll to Top