ಅಸ್ಪ್ರಶ್ಯತೆಯ ಮೃತ್ಯುಛಾಯೆಯ ಅಮಲಿನಲಿ,
ಕನವರಿಸುತ್ತಿರಲು ಸಮಾಜ,
ಒಂದೇ ಜಾತಿ ಒಂದೇ ಮತ ಒಂದೇ ದೇವರೆಂಬ,
ಪವಿತ್ರ ಪರಿಕಲ್ಪನೆಯ ಮೂಲಮಂತ್ರದಲಿ,
ಮನುಕುಲ ವಂದಿತ
ಬ್ರಹ್ಮ ಜ್ಞಾನಿಯ ಶುದ್ದಹಸ್ತದಲಿ,
ಅವಿರ್ಭವಿಸಿದ,
ಲಿಂಗಸ್ವರೂಪಿಯಾಗಿ
ತ್ರೀನೇತ್ರದಾರಿ,
ಗೋಕರ್ಣನಾಥನೆಂಬ ನಾಮಾಂಕಿತದಲಿ,
ಕುದುರೋಳಿ ಕ್ಷೇತ್ರದ ಪರಮಪುಣ್ಯ ನೆಲದಲಿ!
ಕಾಲಾಂತರದಲಿ ಬದಲಾವಣೆ
ಬಯಸಲು ಸಮಾಜ,
ಒಂದೆಡೆ,
ಬಡವರ ಬಂದುವೆನಿಸಿ,
ಗುರು ತತ್ವಾದರ್ಶಗಳ ಹರಿಕಾರನಂತೆ ಗೋಚರಿಸಿ,
ಶ್ರೀ ಕ್ಷೇತ್ರ ನವೀಕರಣರೂವಾರಿಯಾಗಿ ಮೂಡಿಬಂದರು,
ಮೆಟ್ಟಿನಿಂತು,
ವರ್ಣಭೇದದ ಕರಾಳ ಮುಖವನು!
ಗುರುವಾಣಿಯಂತೆ,
ಜಾತಿ-ಮತ ಭೇದ ಮರೆತು,
ಸಮಾಜ ಒಂದಾಗಲು,
ಕಲಾಮತೆಯ ಆರಾಧನೆಯ ನಾಡಹಬ್ಬ,
ಕರಾವಳಿ ಸೀಮೆಗೇ,
ಹೊನ್ನಕಲಶವೆಂಬತೆ ಭಾಸವಗುತ್ತಿಹುದು ಇಂದು,
ವೈಭವದ ಮಂಗಳೂರು ದಸರಾ!

ರಚನೆ : ಬಂಟ್ವಾಳ ಸಂತೋಷ್ ಪೂಜಾರಿ