ಮಂಗಳೂರು : ಜಗದ್ವಿಖ್ಯಾತ ಮಂಗಳೂರು ದಸರಾ ಕೊನೆಯ ದಿನ ಸಾವಿರಾರು ಭಕ್ತರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಬೇಟಿ ನೀಡಿದರು.

ಸಂಜೆಯ ಬಳಿಕ ವಿವಿಧ ತಂಡಗಳಿಂದ ನಡೆದ ಹುಲಿ ವೇಷ ನರ್ತನ ಕ್ಷೇತ್ರದ ಪ್ರಾಂಗಣದಲ್ಲಿ ಜರಗಿತು. ಜನಾರ್ದನ ಪೂಜಾರಿಯವರ ಭಾವಚಿತ್ರವಿರುವ ಹುಲಿವೇಷ ಆಕರ್ಷಣೆಯಾಗಿತ್ತು.
ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಕಾರಣಕರ್ತರಾದ ಎಲ್ಲರಿಗೂ ಕ್ಷೇತ್ರದ ಆಡಳಿತ ಸಮಿತಿ ಕೃತಜ್ಞತೆಯನ್ನು ಸಲ್ಲಿಸಿದೆ.

ಜಿಲ್ಲಾಡಳಿತ ನೀಡಿದ ಮಾರ್ಗಸೂಚಿಯಂತೆ ಮಂಗಳೂರು ದಸರಾ ಮಹೋತ್ಸವವನ್ನು ಆಚರಿಸಲಾಗಿದ್ದು, ಮಾದರಿ ದಸರಾವಾಗಿ ಮೂಡಿಬಂದಿದೆ.
ಈ ಕೆಳಗಿನ ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು
ದಸರಾ ಡ್ಯಾನ್ಸ್ ಪಾರ್ಟಿ, ರೈಸಿಂಗ್ ಫ್ರೆಂಡ್ಸ್ ,ಜವನೆರ್ ಕುಡ್ಲ, ಬಲಿಪ ಫ್ರೆಂಡ್ಸ್ ಉರ್ವಸ್ಟೋರ್ , ಬಿರುವೆರ್ ಕುಡ್ಲ , ಸತ್ಯಸಾರಮಣಿ ಶಾರದಾ ಹುಲಿ , ಬಲ್ಲಾಲ್ ಬಾಗ್ ಫ್ರೆಂಡ್ಸ್ ,ಚಿಲಿಂಬಿ ಫ್ರೆಂಡ್ಸ್ , ಜೂನಿಯರ್ ಬಾಯ್ ಗ್ರೀನ್ ಪಾರ್ಕ್ , ಶಿವಫ್ರೆಂಡ್ಸ್ ಬರ್ಕೆ ಫ್ರೆಂಡ್ಸ್ ಹಾಗೂ ಮಂಜಲ್ ಬೈಲ್ ತಂಡಗಳ ಹುಲಿ ವೇಷ ಪ್ರದರ್ಶನ ಸರ್ವರ ಮನಸೂರೆಗೊಂಡಿತು.