ವಿವಿಧ ಸಂಘಟನೆಯ ಸ್ವಯಂ ಸೇವಕರು ಕ್ಷೇತ್ರದ ನಿಯಮಗಳಿಗೆ ಅನುಗುಣವಾಗಿ ಮಂಗಳೂರು ದಸರಾ ಶಿಸ್ತುಬದ್ದವಾಗಿ ಕೋವಿಡ್ ಆರೋಗ್ಯ ವಿಷಮ ಸ್ಥತಿಯಲ್ಲಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷ ವಾಕ್ಯದಡಿ ನಡೆಯುವ ಮಂಗಳೂರು ದಸರಾದಲ್ಲಿ ಸ್ವಯಂ ಸೇವಕರ ಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಯಿತು.
ಕ್ಷೇತ್ರದ ಭಕ್ತಾದಿಗಳು ಕ್ಷೇತ್ರದ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಭಕ್ತಾದಿಗಳಿಗೆ ವಿನಮ್ರವಾಗಿ ತಿಳಿಸಿ ದಸರಾದ ಮೊದಲ ದಿನದ ಯಶಸ್ಬಿಗೆ ಸಹಕರಿಸಿದರು.
ನಿರೀಕ್ಷೆಗೂ ಮೀರಿ ಆಗಮಿಸಿದ ಸ್ವಯಂಸೇವಕರ ಕಾರ್ಯವನ್ನು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಆರ್.ಪದ್ಮಾರಾಜ್ ಶ್ಲಾಘಿಸಿದರು.
ಯುವವಾಹಿನಿ ಮಂಗಳೂರು ಹಾಗೂ ಕಂಕನಾಡಿ ಘಟಕ, ಬಿರುವೆರ್ ಕುಡ್ಲ ಮೂಡುಬಿದಿರೆ, ಬಜಪೆ ಹಾಗೂ ಬಂಟ್ವಾಳ ಘಟಕಗಳು, ಕ್ಷೇತ್ರದ ಸೇವಾ ದಳ ಹೀಗೆ ಒಟ್ಟು 175 ಸದಸ್ಯರು ಸ್ವಯಂಸೇವಕರಾಗಿ ದಸರಾದ ಮೊದಲ ದಿನ ವಿವಿಧ ಕಾರ್ಯಗಳಲ್ಲಿ ಭಾಗವಹಿಸಿ ಶಿಸ್ತುಬದ್ಧ ವ್ಯವಸ್ಥೆಗೆ ಸಹಕರಿಸಿದರು.