ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 17.10.2020 ಶನಿವಾರ ನಡೆದ ಮಂಗಳೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಹುಲಿ ವೇಷ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಶಾರದಾ ಪ್ರತಿಷ್ಠೆಯ ಸಂದರ್ಭ ಹುಲಿ ಕುಣಿತ ವಿವಿಧ ಕಸರತ್ತುಗಳಿಂದ ರಂಜಿಸಿತು. ಕೆಲವು ಹುಲಿವೇಷಗಳ ಮೇಲೆ ತುಳು ಲಿಪಿ ಬರಹ ಎಲ್ಲರ ಗಮನ ಸೆಳೆದಿತ್ತು.

ಕೊರೊನಾ ಕಾರಣವೊಡ್ಡಿ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಈ ಹಿಂದೆ ಅನುಮತಿ ನೀಡಿರಲಿಲ್ಲ ಆದರೆ ಹುಲಿವೇಷ ಕುಣಿತ ಸೇವೆಗೆ ಅವಕಾಶ ನೀಡಬೇಕು ಎಂದು ಕರಾವಳಿಯ ವಿವಿಧ ಸಂಘಟನೆಗಳು ದ.ಕ. ಜಿಲ್ಲಾಡಳಿತವನ್ನು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ಎ. – ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ಆ ನಿಬಂಧನೆಗಳ ಮುಖೇನ ಹುಲಿವೇಷ ಕುಣಿತ ಸೇವೆಗೆ ಅವಕಾಶ ನೀಡಲಾಗಿತ್ತು.