ಭಗವಾನ್ ಶ್ರೀ ನಾರಾಯಣ ಗುರುದೇವನಿಗೆ ವಿಶೇಷ ಗುರುಪೂಜೆ ಕ್ಷೇತ್ರದ ಗುರು ಸಾನಿಧ್ಯದಲ್ಲಿ. ಇಂದು ಬಹಳ ಭಕ್ತಿ ಸಂಭ್ರಮದಿಂದ ನಡೆಯಿತು. ಮಹಾದೇವವನ್ನು ಸೃಷ್ಟಿಯ ಬಣ್ಣದ ಬಣ್ಣದ ಹೂವುಗಳಿಂದ ಬಹಳ ಸುಂದರವಾಗಿ ಅಲಂಕಾರ ಮಾಡಿರುವುದು ಗುರುದೇವರ ಪರಮ ಭಕ್ತರ ಸಂತೋಷಕ್ಕಾಗಿ, ಆನಂದಕ್ಕಾಗಿ, ನೆಮ್ಮದಿಗಾಗಿ, ಅನ್ನುವುದು ಎಷ್ಟೋ ಸತ್ಯನೋ ಅಷ್ಟೇ ಸತ್ಯ ಗುರುದೇವರ ಮೇಲಿರುವ ಪೂರ್ಣ ಭಕ್ತಿ ಶ್ರದ್ಧೆ ಗೌರವ ಅನ್ನುವುದು ಅಷ್ಟೇ ಸತ್ಯವಾಗಿದೆ.
ಇದು ಇಲ್ಲಿನ ವಿಶೇಷ. ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಯಾವುದೇ ವಿಶೇಷ ಮಹೋತ್ಸವ ಇರಲಿ, ಪ್ರತಿ ನಿತ್ಯದ ದೇವರ ಪೂಜೆಯು ಇರಲಿ, ಮೊದಲು ಶ್ರೀ ನಾರಾಯಣ ಗುರುದೇವನಿಗೆ ಪ್ರಾರ್ಥನೆ, ಪೂಜೆ ಸಲ್ಲಿಸುವುದು ಕ್ಷೇತ್ರದ ಸಂಪ್ರದಾಯ ಅಂದಿನಿಂದಲೂ ಇಂದಿನವರೆಗೂ ನಡೆಯುತ್ತಿದ್ದು ಗುರು ಸಂಕಲ್ಪವೇ ಸಾಕ್ಷಿ. “ಮಿತ್ರ ನಿನ್ನ ಮನೆಯಲ್ಲಿ ನಿತ್ಯ ಮೊದಲು ಇರಲಿ ಗುರು ಸ್ಮರಣೆ… ಗುರು ಪ್ರಾರ್ಥನೆ… ಗುರು ಪೂಜೆ… ನಂತರ ನಿನ್ನ ಇಷ್ಟ ದೇವರ ಪೂಜೆ…” ಇದು ನಿಜವಾದ ಕ್ರಮ, ಇದುವೇ ಗುರು ಧರ್ಮ, ಶುಭವಾಗಲಿ… ಸರ್ವ ಮನುಕುಲಕ್ಕೆ… ಮುಂದೆ ಸತ್ಯಯುಗ….ಅದಕ್ಕಾಗಿಯೇ ಇರಲಿ ನಿತ್ಯವೂ ನಿನ್ನ ನಡೆ ಪರಮ ಧರ್ಮದಂತೆ… ಪರಮ ಸತ್ಯದಂತೆ….
ಮುಂದಿನ ಸುಂದರ ಬದುಕು ನಿನ್ನದ್ದು…ಇದು ಸತ್ಯ.. ಅದುವೇ ಪರಮ ಸತ್ಯ.
ಮಂಗಳೂರು: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ
ಬ್ರಹ್ಮ ಶ್ರೀ ನಾರಾಯಣಗುರುವರ್ಯರಿಗೆ ವಿಶೇಷ ಗುರುಪೂಜೆ
