ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಒಂಬತ್ತನೆಯ ದಿನ (25.10.2020) ಸಿದ್ದಿಧಾತ್ರಿ ಆರಾಧನೆ.

ಸಿದ್ಧಿಧಾತ್ರಿ ದೇವಿಯ ಪೂಜಾ ವಿಧಾನ
ದೇವಿ ಸಿದ್ಧಿಧಾತ್ರಿ ಪೂಜೆಗೆ ತಾವರೆ, ಹಾಗೂ ಸುಗಂಧ ಭರಿತವಾದ ಮಲ್ಲಿಗೆ ಹೂವನಿಂದ ಪೂಜಿಸಬೇಕು…ಏಕಾಗ್ರತೆ ಹಾಗೂ ಭಕ್ತಿಯಿಂದ
ಪೂಜಿಸಿ, ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು.. ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು.. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು…
ಸಿದ್ಧಿಧಾತ್ರಿಯ ಮಂತ್ರ
ಓಂ ದೇವಿ ಸಿದ್ಧಿಧಾತ್ರಿಯೈ ನಮಃ (108 ಸಾರಿ)
ಸಿದ್ಧ ಗಂಧರ್ವ ಯಕ್ಷಾಧೈರ್ಯಸುರೈಮರಾಪಿ ಸೇವ್ಯಾಮಾನಾ ಸದಾಭುಯಾತ್ ಸಿದ್ಧಿದಾಯಿನಿ
ಸಿದ್ಧಿಧಾತ್ರಿ ದೇವಿಯ ಸ್ತುತಿ
ಯಾ ದೇವಿ ಸರ್ವಭೂತೇಶ್ವರಿ ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಸಿದ್ಧಿಧಾತ್ರಿ ದೇವಿಯ ಧ್ಯಾನ
ವಂದೇ ವಾಂಚಿತ ಮನೋರಥಾರ್ಥ ಚಂದ್ರಾರ್ಧಕೃತಶೇಖರಾಂ
ಕಮಲಸ್ಥಿತ ಚತುರ್ಭುಜಾ ಸಿದ್ದಿದಾತ್ರಿ ಯಶಸ್ವಿನೀ
ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ
ಶಂಖ, ಚಕ್ರ, ಗಧ, ಪದ್ಮಧರಂ ಸಿದ್ದಿದಾತ್ರಿ ಭಜೆಂ
ಪೀತಾಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ
ಮಂಜೀರಾ, ಹಾರಾ, ಕೇಯೂರಾ, ಕಿಂಕಿಣೀ, ರತ್ನಕುಂಡಲ ಮಂಡಿತಂ
ಪ್ರಭುಲ್ಲ ವದನಾಂ ಪಲ್ಲವಾಧರಂ ಕಾಂತಾ ಕಪೋಲಮ್ ಪಿನ್ ಪಯೋಧರಾಂ
ಕಮನೀಯಾಂ ಲಾವಣ್ಯಾಂ ಚಾರೂತ್ರಿವಲೀಂ ಶ್ರೀನಾಕತಿ ನಿಮ್ನಾನಾಭಿ ನಿತಂಬನೀಂ
ಸಿಧ್ದಿದಾತ್ರೀದೇವಿ
ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವ ಅಷ್ಟಸಿದ್ಧಿಗಳನ್ನು ನೀಡುವಳು.. ಶಾಸ್ತ್ರೀಯ ವಿಧಾನದಿಂದ ಹಾಗೂ ಅತ್ಯಂತ ನಿಷ್ಠೆಯಿಂದ ಸಿದ್ಧಿ ಧಾತ್ರಿಯ ಉಪಾಸನೆ ಮಾಡುವ ಭಕ್ತರನ್ನು ಅರಿಷಡ್ವರ್ಗಗಳಿಂದ ಪಾರುಮಾಡಿ ತನ್ನೊಳಗಿರುವ ಪರಮಾತ್ಮನನ್ನು ಅರಿಯುವುದಕ್ಕಾಗಿ ಸರ್ವಸಿಧ್ಧಿಗಳನ್ನಿತ್ತು ಆಶೀರ್ವದಿಸುವಳು..
ಈ ದಿನದ ಪೂಜೆಯಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ವಯಸ್ಸಿಗೆ ತಕ್ಕಂತೆ, ವಿವಿಧ ರೂಪಗಳಿಂದ ಪೂಜಿಸಲಾಗುವುದು…ಮಕ್ಕಳು ಸಾಕ್ಷಾತ್ ದೇವಿಯ ಸ್ವರೂಪರಾಗಿರುತ್ತಾರೆ..
- ಎರಡು ವರ್ಷದ ಹೆಣ್ಣು ಮಕ್ಕಳು — ಕುಮಾರಿ ಎಂದು.
- ಮೂರು ವರ್ಷದ ಬಾಲಕಿ — ತ್ರಿಮೂರ್ತಿ.
- ನಾಲ್ಕು ವರ್ಷದ ಬಾಲಕಿ — ಕಲ್ಯಾಣಿ.
- ಐದು ವರ್ಷದ ಬಾಲಕಿ — ರೋಹಿಣಿ.
- ಆರು ವರ್ಷದ ಬಾಲಕಿ — ಕಾಳಿಕಾ.
- ಏಳು ವರ್ಷದ ಬಾಲಕಿ — ಚಂಡಿಕಾ.
- ಎಂಟು ವರ್ಷಗಳ ಬಾಲಕಿ — ಶಾಂಭವಿ.
- ಒಂಭತ್ತು ವರ್ಷದ ಬಾಲಕಿ –ದುರ್ಗಾ
- ಹತ್ತು ವರ್ಷದ ಬಾಲಕಿಯರನ್ನು ಸುಭದ್ರ.
ಹೀಗೆ ಬಾಲಕಿಯರನ್ನು ದುರ್ಗೆಯ ರೂಪದಲ್ಲಿ ಅಲಂಕರಿಸಿ…ಪೂಜಿಸಲಾಗುವುದು…