ನವರಾತ್ರಿಯ ಏಳನೇ ದಿನದಂದು (23.10.2020) ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು..ಇದು ದುರ್ಗಾ ದೇವಿಯ ಏಳನೆಯ ಅವತಾರವಾದ ಅತ್ಯಂತ ಉಗ್ರರೂಪವಾಗಿದೆ.. ಈ ಕಾಲರಾತ್ರಿದೇವಿಯನ್ನು ಸಪ್ತಮಿಯ ದಿನ ಪೂಜಿಸಲಾಗುತ್ತದೆ…ದೇವಿಯ ಎಲ್ಲಾ ರೂಪಗಳಲ್ಲಿ ಈ ರೂಪವು ಬಹಳ ಭೀಭತ್ಸವಾದ (ಭಯಂಕರ) ರೂಪವಾಗಿದೆ..
ರಾಕ್ಷಸರ ಪಾಲಿಗೆ ದುಸ್ವಪ್ನವಾಗಿರುವಳು.. ಈಕೆಯು ಹಿಡಿದಿರುವ ಆಯುಧಗಳು ಕೂಡಾ ಬಹಳ ಕ್ರೂರತೆಯನ್ನು ತೋರಿಸುತ್ತವೆ.. ಧರ್ಮ ರಕ್ಷಣೆಗಾಗಿ, ಧರ್ಮವನ್ನು ಮೀರಿದವರ ಪಾಲಿಗೆ ಮಹಾಮಾತೆಯು ಕಾಳರಾತ್ರಿಯಾಗಿ ಭಯ ಹುಟ್ಟಿಸುವಳು..ಆದರೆ ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ ಪಾರ್ವತಿ ದೇವಿಯಾಗಿರುವಳು..
?ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕಾರ್ಗತ್ತಲಿನ ಸಮಯದ ರೂಪವಾಗಿದೆ. ಶುಂಭಾ ಮತ್ತು ನಿಶುಂಬಾ ಎಂಬ ರಾಕ್ಷಸರನ್ನು ಕೊಲ್ಲಲು ಪಾರ್ವತಿಯು ತನ್ನ ಸುಂದರವಾದ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ಕಾಲರಾತ್ರಿಯ ರೂಪ ಧಾರಣೆ ಮಾಡಿ, ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಳರಾತ್ರಿಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುತ್ತಾಳೆ.. ಕಾಲರಾತ್ರಿಯು ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿಯನ್ನು ಕರುಣಿಸುವಳು.. ಇದರಿಂದಾಗಿ ಈಕೆಯನ್ನು ಶುಭಂಕರಿಯೆಂದು (ಪವಿತ್ರ) ಕೂಡ ಪರಿಗಣಿಸಲಾಗುವುದು…

? ದೇವಿಯು ಕೆಂಪು ಬಣ್ಣದ ಉಡುಪಿನಲ್ಲಿದ್ದು, ಅವಳ ಉರಿಯುತ್ತಿರುವ ಕಣ್ಣುಗಳಲ್ಲಿ ಸಾಕಷ್ಟು ಕೋಪದಿಂದ ಕಾಣಿಸಿಕೊಳ್ಳುತ್ತಾಳೆ… ಅವಳ ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ…ಗಾಢಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವಳು.. ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ವಿದ್ಯುತ್ತಿನ ಕಿರಣಗಳು ಪರಿಸರದಲ್ಲಿ ಪಸರಿಸುತ್ತಿರುತ್ತವೆ.
?ಇವಳು ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ… ಬಲಗಡೆಯ ಕೈಗಳಲ್ಲಿ ವರಮುದ್ರೆ, ಹಾಗೂ ಅಭಯಮುದ್ರೆ ಇದ್ದರೆ, ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ… ಭಯಂಕರ ರೂಪಧಾರಿಣಿಯಾಗಿದ್ದರೂ ಕೂಡ, ಶುಭ ಫಲಗಳನ್ನು ನೀಡುವ ‘ಶುಭಂಕರಿ’ ಯ ಉಪಾಸನೆಯಿಂದ ಭಕ್ತರಲ್ಲಿ ಮನೆಮಾಡಿರುವ ಗೃಹಬಾಧೆ, ಜಂತುಭಯ, ಚೋರಭಯ, ಶತ್ರುಭಯ, ಜಲಭಯ, ಅಗ್ನಿಭಯ, ಮುಂತಾದ ಎಲ್ಲ ಭಯಗಳೂ ನಿವಾರಣೆಯಾಗುವುದು.

ಕಾಲರಾತ್ರಿಯ ಪುರಾಣದ ಕಥೆ
ರಕ್ತಬೀಜಾಸುರರನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ… ರಕ್ತಬೀಜಾಸುರರನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ… ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ.. ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.
ಕಾಲರಾತ್ರಿಯ ಮಹತ್ವ
ಕಾಲರಾತ್ರಿಯು ಶನಿಗ್ರಹದ ಅಧಿಪತಿಯಾಗಿರುವಳು.. ಜನರು ಮಾಡಿರುವಂತಹ ಒಳಿತು – ಕೆಡುಕುಗಳನ್ನು ನೋಡಿ ವರ ನೀಡುವಳು… ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವಳು.. ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವಳು… ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವವನ್ನು ತಗ್ಗಿಸಬಹುದು…ಈ ದೇವಿಯ ಸ್ಮರಣೆಯಿಂದ ಭೂತ – ಪ್ರೇತಗಳು ಭಯ ಭೀತವಾಗಿ ಓಡಿ ಹೋಗುತ್ತವೆ.
ಕಾಲರಾತ್ರಿಯ ಪೂಜೆ
ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂವೆಂದರೆ ರಾತ್ರಿ ಅರಳುವ ಮಲ್ಲಿಗೆ ಹೂವು, ಮಲ್ಲೆ ಹೂ, ಶ್ರದ್ಧಾಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸಬೇಕು… ಮೊದಲು ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.. ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು…ಈ ದಿನ ಕಾಲರಾತ್ರಿಗೆ ಅನ್ನದಿಂದ ಮಾಡಿದ ಯಾವುದೇ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.

ಯೋಗ ಸಾಧಕರು ಮನಸ್ಸನ್ನು ಸಹಸ್ರಾರ ಚಕ್ರದ ಮೇಲೆ ಕೇಂದ್ರೀಕರಿಸಬೇಕು. ಮನುಷ್ಯನಲ್ಲಿರುವ ತಮೋಗುಣಗಳಾದ – ರಾಕ್ಷಸ ಪ್ರವೃತ್ತಿಯ ( ನೆಗೆಟಿವ್ ) ಗುಣಗಳನ್ನು, ಅಜ್ಞಾನದ ಅಂಧಕಾರವನ್ನು ತೊಲಗಿಸಬೇಕು…ಎನ್ನುವ ಸೂಚನೆಯನ್ನು ಸಾರುವ ಅವತಾರವಾಗಿದೆ.
ಕಾಲರಾತ್ರಿ ದೇವಿಯ ಮಂತ್ರ
ಓಂ ದೇವೀ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ
ಕಾಲರಾತ್ರಿಯ ಪ್ರಾರ್ಥನೆ
ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ
ಕಾಲರಾತ್ರಿಯ ಧ್ಯಾನ
ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ
ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ
ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ
ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ
ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ
ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ
ಇವಾಂ ಸಚಿಯಂತಾಯೆತ್ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ
ಕಾಲರಾತ್ರಿಯ ಸ್ತೋತ್ರ
ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ
ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರೂಪಿಣಿ
ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ
ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ
ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ
ಕಾಲರಾತ್ರಿಯ ಕವಚ
ಓಂ ಕ್ಲಿಂ ಮೇ ಹೃದಯಂ ಪಾತು ಪದೌ ಶ್ರೀಕಾಲರಾತ್ರಿ
ಲಲಾಟೇ ಸತತಂ ಪಾತು ತುಶಾಗ್ರ ನಿವಾರಿಣಿ
ರಾಸನಂ ಪಾತು ಕೌಮಾರಿ, ಭೈರವಿ ಚಕ್ಷುಶೋರ್ಭಾಮಾ
ಕತೌ ಪ್ರಿಶ್ತೇ ಮಹೇಶನಿ, ಕರ್ಣೌಶಂಕರಾಭಾಮಿನಿ
ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ
ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ
?ಕಾಲರಾತ್ರಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಸರ್ವಭಯವೂ ನಿವಾರಣೆಯಾಗುವುದು… ವ್ಯಕ್ತಿಯ ಶ್ರೇಯೋಭಿವೃದ್ಧಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ತೊಂದರೆಗಳೂ ನಿವಾರಣೆಯಾಗುವುದು.. ಹಾಗೂ ಸರ್ವರೋಗಗಳಿಂದ ಮುಕ್ತಿ ಸಿಗುವುದು… ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವವಳು ಕಾಲರಾತ್ರಿ.