ಕಾತ್ಯಾಯಿನಿ ದೇವಿಯನ್ನು ಯುದ್ಧದ ದೇವತೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾನಿಗೆ ಹುಟ್ಟಿದ ಮಗಳು ಪಾರ್ವತಿಯು ಕಾತ್ಯಾಯಿನಿ. ದುರ್ಗೆಯ ಈ ರೂಪವನ್ನು ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 6ನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸುವುದು ಹೇಗೆ..? ಪೂಜೆಯ ಪ್ರಯೋಜನವೇನು..? ಇಲ್ಲಿದೆ ಕಾತ್ಯಾಯಿನಿ ದೇವಿ ಮಂತ್ರ!
ನವರಾತ್ರಿಯು ಭಾರತದಲ್ಲಿ ಕಂಡುಬರುವ ಪ್ರಮುಖ ಹಬ್ಬಗಳಲ್ಲೊಂದು. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬದಲ್ಲಿ ಆರಾಧಿಸುವ ದೇವಿ ಎಂದರೆ ಅದು ತಾಯಿ ದುರ್ಗಾ ದೇವಿ. ಪಶ್ಚಿಮ ಬಂಗಾಳದಲ್ಲಿ ತಾಯಿ ದುರ್ಗೆಯನ್ನು ಪ್ರತೀ ಬೀದಿಗಳಲ್ಲಿ ಗಣೇಶನಂತೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಬಂಗಾಳದಲ್ಲಿ ತಾಯಿ ದುರ್ಗೆಗೆ ವಿಶೇಷ ಸ್ಥಾನವಿದೆ. ಅದೇ ರೀತಿ ಗುಜರಾತ್‌ನಲ್ಲಿ ನವರಾತ್ರಿಯ ಒಂಭತ್ತೂ ದಿನಗಳ ಕಾಲ ಉಪವಾಸವಿರುವ ಆಚರಣೆ ನಡೆದುಕೊಂಡುಬಂದಿದೆ.
ತಾಯಿ ದುರ್ಗೆಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ರಾಮನು ರಾವಣಾಸುರನನ್ನು ಕೊಂದ ದಿನ, ಕುರುಕ್ಷೇತ್ರದಲ್ಲಿ ಪಂಚ ಪಾಂಡವರು ಕೌರವರ ಪಡೆಯನ್ನು ಸಂಹರಿಸಿದ ದಿನ ಎಂದೂ ಹೇಳಲಾಗುತ್ತದೆ. ಉತ್ತರ ಭಾರತದಲ್ಲಿ ರಾವಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದನ್ನು ಸುಡುವ ಪದ್ಧತಿ ಜಾರಿಯಲ್ಲಿದೆ. ಈಗಲೂ ಕೂಡ ಕಟ್ಟಿಗೆ ಮೊದಲಾದ ಉರುವಲುಗಳಲ್ಲಿ ರಾವಣಾಸುರನ ಮೂರ್ತಿಯನ್ನು ಮಾಡಿ ಸುಡಲಾಗುತ್ತದೆ.

ನವರಾತ್ರಿಯ ಒಂಭತ್ತೂ ದಿನಗಳ ಕಾಲ ನವ ದುರ್ಗೆಯ ಒಂದೊಂದು ಅವತಾರವನ್ನು ಆರಾಧಿಸಲಾಗುತ್ತದೆ. ಪ್ರಮುಖವಾಗಿ ದುರ್ಗಾ ಮಾತೆ, ಲಕ್ಷ್ಮೀ ದೀವಿ, ಸರಸ್ವತಿಯನ್ನು ಮೂರು ದಿನಗಳಾಗಿ ವಿಂಗಡಿಸಿ ಆರಾಧಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ತಾಯಿ ಕಾತ್ಯಾಯಿನಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನವನ್ನು ಷಷ್ಟಿ ತಿಥಿ ಎಂದೂ ಕರೆಯಲಾಗುತ್ತದೆ. ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಲು ಈ ದಿನವನ್ನು ಭಕ್ತರು ಮೀಸಲಿಡುತ್ತಾರೆ.

ನವ ದುರ್ಗೆಯರಲ್ಲಿ ಕಾತ್ಯಾಯಿನಿ ದೇವಿಯು ಆರನೆಯವಳಾಗಿದ್ದಾಳೆ. ಈ ದೇವಿಯನ್ನು ಯುದ್ಧದ ದೇವತೆ ಎಂದೂ ಆರಾಧಿಸಲಾಗುತ್ತದೆ. ಮದುವೆಯಾಗಲು ತೊಂದರೆಗಳನ್ನು ಎದುರಿಸುತ್ತಿರುವ ಹುಡುಗಿಯರು ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಿದರೆ ದೋಷಗಳು ಪರಿಹಾರವಾಗಿ ಶೀಘ್ರವೇ ಮದುವೆಯಾಗುತ್ತದೆ ಎಂದು ನಂಬಲಾಗಿದೆ.

ವೈವಾಹಿಕ ಜೀವನದಲ್ಲಿ ತೊಂದರೆಯಾಗುತ್ತಿದ್ದರೆ ತಾಯಿ ಆರಾಧನೆಯಿಂದಾಗಿ ನಿಮ್ಮ ಜೀವನ ಸರಿ ದಾರಿಗೆ ಬರುತ್ತದೆ ಎಂದು ಭಕ್ತರು ನಂಬುತ್ತಾರೆ. ನವರಾತ್ರಿಯಲ್ಲಿ ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಋಣಾತ್ಮಕ ಶಕ್ತಿಗಳು ನಿರ್ಮೂಲನೆಯಾಗುತ್ತದೆ.
ನವರಾತ್ರಿ ಆರನೇ ದಿನದ ವಿವರಗಳು
ಪ್ರಿಯವಾದ ಹೂವು: ಚೆಂಡು ಹೂ
ಷಷ್ಠಿ ದಿನದ ಬಣ್ಣ: ಹಸಿರು
ದೇವತೆ: ತಾಯಿ ಕಾತ್ಯಾಯಿನಿ
ಮಂತ್ರ: ಓಂ ದೇವಿ ಕಾತ್ಯಾಯಿನಿ ನಮಃ
ತಾಯಿ ಕಾತ್ಯಾಯಿನಿ ದೇವಿಯ ಕುರಿತು:
ಮಹಿಷಾಸುರ ಮರ್ದನದಲ್ಲಿ ತಾಯಿ ಕಾತ್ಯಾಯಿನಿಯೂ ಭಾಗಿಯಾಗಿದ್ದಳು. ಮಹಿಷನ ಮರ್ದನಕ್ಕಾಗಿ ಆಕೆಯು ಅವತಾರ ಎತ್ತಿದ್ದಳು ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯನ್ನು ಯುದ್ಧದ ದೇವತೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾನಿಗೆ ಹುಟ್ಟಿದ ಮಗಳು ಪಾರ್ವತಿಯು ಕಾತ್ಯಾಯಿನಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಸಿಂಹಾರೂಢಳಾಗಿರುವ ತಾಯಿಯು ನಾಲ್ಕು ಕೈಗಳನ್ನು ಹೊಂದಿದ್ದು ಕಮಲದ ದಂಟು, ಮತ್ತು ಕತ್ತಿಯನ್ನು ಎಡ ಭಾಗದ ಎರಡು ಕೈಗಳಲ್ಲಿ ಹಿಡಿದಿದ್ದಾಳೆ. ಬಲ ಭಾಗದ ಒಂದು ಕೈಗಳಲ್ಲಿ ಅಭಯ ಮುದ್ರೆ ಹಾಗೂ ಇನ್ನೊಂದು ಕೈನಲ್ಲಿ ಮಣಿಹಾರವನ್ನು ಹಿಡಿದಿದ್ದಾಳೆ.
ತಾಯಿ ಗೌರಿಯು ಸಿಂಹವನ್ನು ಕಾತ್ಯಾಯಿನಿ ದೇವಿಗೆ ಉಡುಗೊರೆಯಾಗಿ ನೀಡಿದ್ದಾಳೆ ಎಂದು ಪುರಾಣದ ಕಥೆಗಳು ಹೇಳುತ್ತವೆ. ಮಹರ್ಷಿ ಕಾತ್ಯಾಗೆ ಜನಿಸಿದ ದೇವಿಯನ್ನು ಕಾತ್ಯಾಯಿನಿ ದೇವಿ ಎಂದು ಆರಾಧಿಸಲಾಗುತ್ತದೆ.
ತಾಯಿಯ ಪೂಜೆಯಿಂದಾಗಿ ಹೆಣ್ಣುಮಕ್ಕಳಿಗೆ ಬೇಗನೆ ಮದುವೆಯಾಗುತ್ತದೆ. ಜೊತೆಗೆ ಸದ್ಗುಣಶೀಲ ಪತಿ ಸಿಗುತ್ತಾನೆ ಎನ್ನುವ ನಂಬಿಕೆ ಇದೆ. ಮಹಿಷಾಸುರನ ಮರ್ದನದಲ್ಲಿ ತಾಯಿ ಕಾತ್ಯಾಯಿನಿ ಮುಖ್ಯ ಪಾತ್ರ ವಹಿಸಿದ್ದಳು ಎಂದು ಹೇಳಲಾಗುತ್ತದೆ. ತಾಯಿಯ ಪೂಜೆಯಿಂದಾಗಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗುವ ಜೊತೆಗೆ ಜನ್ಮ ಕುಂಡಲಿಯಲ್ಲಿ ಗುರುವಿನ ದೋಷವಿದ್ದರೆ ಪರಿಹಾರವಾಗುತ್ತದೆ ಎಂದೂ ನಂಬಲಾಗಿದೆ.
ತಾಯಿ ಆರಾಧಿಸುವ ಮಂತ್ರಗಳು
“ಓಂ ದೇವಿ ಕಾತ್ಯಾಯಿನಿ ನಮಃ
ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ.”
ಪ್ರಾರ್ಥನೆ
“ಚಂದ್ರಹಾಸೋಜ್ವಲಕಾರ ಶರ್ದೂಲವರವಾಹನ
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಟಿನಿ.”
ಸ್ತುತಿ
“ಯಾ ದೇವಿ ಸರ್ವಭೂತೇಶು ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ
ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ”
ಧ್ಯಾನ
“ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ
ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್
ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್.”
ಸ್ತೋತ್ರ
ಕಾಂಚನಭಾ ವರಾಭಯಂ ಪದ್ಮಾಧರ ಮುಖತ್ವೋಜ್ವಲಮ್
ಸ್ಮೇರಮುಖಿ ಶಿವಪತ್ನಿ ಕಾತ್ಯಾಯನೇಸುತೇ ಸಮೋಸ್ತುತೇ
ಪತಂಭರಾ ಪರಿಧನಮ್ ನಾನಾಲಂಕಾರ ಭೂಷಿತಮ್
ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ
ಪರಮಾನಂದಮಯೀ ದೇವಿ ಪರಬ್ರಹ್ಮಾ ಪರಮಾತ್ಮ
ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ
ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಪ್ರತಿಮ,
ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ
ಕಾಮ್ ಬಿಜಾ, ಕಾಮ್ ಜಪನಂದಕಮ್ ಬಿಜಾ ಜಪ ತೋಶೈಟ್
ಕಾಮ್ ಕಾಮ್ ಬಿಜಾಮ್ ಜಪದಾಶಕ್ತಕಾಮ್ ಕಾಮ್ ಸಂತುತಾ
ಕಾಮ್ಕರಹಾರ್ಶಿನಿಕಮ್ ಧನದಾಧಾನಮಸಾನ
ಕಾಮ್ ಬೀಜ ಜಪಕಾರಿನಿಕಾಮ್ ಬಿಜಾ ತಪ ಮಾನಸ
ಕಾಮ್ ಕರಿನಿ ಕಾಮ್ ಮಂತ್ರಪೂಜಿತಕಮ್ ಬೀಜ ಧಾರಿಣಿ ಕಾಂ ಕಿಮ್ ಕುಮ್‍ಕೈ ಕಾಹ್ ಥಾಹ್ ಚಾಹ್ ಸ್ವರೂಪಿಣಿ.
ಕವಚ
ಕಾತ್ಯಾಯನ ಮುಖ ಪತು ಕಾಮ್ ಸ್ವಾಹಸ್ವರೂಪಿಣಿ
ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ
ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ.
ಆರನೇ ದಿನದ ಶಾರದಾ ದೇವಿಯ ಅಲಂಕಾರ