ಮಂಗಳೂರು : ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಮೂರನೇ ದಿನವಾದ ಸೋಮವಾರ ( ದಿನಾಂಕ : 19.10.2020) ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಪ್ರಸ್ತುತಗೊಂಡ ಮಂಗಳೂರು ಬಿಲ್ಲವ ಸ್ವರಸಂಗಮ ಪ್ರೇಕ್ಷಕರ ತನುಮನ ರಂಜಿಸಿತು. ಇವರಿಂದ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ದೇಶಭಕ್ತಿಯ ಕಾರ್ಯಕ್ರಮ ನಡೆಯಿತು.
ಪ್ರತಿಭಾನ್ವಿತ ಕಲಾವಿದರ ಜತೆಗೆ ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಯಿತು.

ರಂಗಭೂಮಿ, ಚಲನಚಿತ್ರದ ನಟ, ಗಾಯಕ ಭೋಜರಾಜ್ ವಾಮಂಜೂರು ಹಾಡು ಹಾಡುವ ಮೂಲಕ ರಂಜಿಸಿದರು. ಬಳಿಕ ಕ್ಷೇತ್ರಾಡಳಿತ ಮಂಡಳಿ ವತಿಯಿಂದ ಭೋಜರಾಜ್ ವಾಮಂಜೂರು ಅವರನ್ನು ಗೌರವಿಸಲಾಯಿತು.
ಗೋಪಾಲಕೃಷ್ಣ ಬಜಪೆ ಕಾರ್ಯಕ್ರಮ ಸಂಯೋಜಿಸಿದರು. ದಿನೇಶ್ ಸುವರ್ಣ ರಾಯಿ ವಂದಿಸಿದರು.