ಮಂಗಳೂರು: ಜಯ ಸಿ. ಸುವರ್ಣರು ನಿಧನರಾದ ಸುದ್ದಿ ತಿಳಿದಾಗ ಅವರು ಮಾಡುತಿದ್ದ ಸೇವಾಕೈಂಕರ್ಯ ಮುಂದುವರಿಸುವವರು ಯಾರು ಎಂದು ಕಳವಳಗೊಂಡಿದ್ದೆ. ಜಯ ಸುವರ್ಣರು ಶತಮಾನ ಕಂಡಮಹಾನ್ ಸಮಾಜಸೇವಕ. ಅವರ ಆದರ್ಶವನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ಜಯ ಸಿ. ಸುವರ್ಣರಿಗೆ ಅವರ ಹುಟ್ಟೂರು ನಂದಿಕೂರು ಬಳಿಯ ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಜಯ ಸಿ. ಸುವರ್ಣ ಸ್ಮಾರಕ ಸಭಾಭವನದಲ್ಲಿ ಗುರುವಾರ ನುಡಿನಮನ ಸಲ್ಲಿಸಿದರು.

ಜನಾರ್ದನ ಪೂಜಾರಿ- ಜಯ ಸಿ ಸುವರ್ಣ ಅವರಿಬ್ಬರೂ ಸಮಾಜದ ಬಡವರ ಉದ್ಧಾರಕ್ಕಾಗಿ ಜತೆಗೂಡಿ ಕೆಲಸ ಮಾಡಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮನೋಹರ್ ಶೆಟ್ಟಿ ಸಾಯಿರಾಧಾ, ಮಾಜಿ ಸಚಿವ ರಮಾನಾಥ ರೈ, ಶಾಸಕ ಮಧು ಬಂಗಾರಪ್ಪ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಐವನ್ ಡಿಸೋಜ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶಾಸಕ ಸುನೀಲ್ ಕುಮಾರ್, ಜಗದೀಶ್ ಅಧಿಕಾರಿ, ಮಿಥುನ್ ರೈ, ಮಾಜಿ ಶಾಸಕ ಮೊದೀನ್ ಬಾವಾ, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ ವಾಸುದೇವ ಆರ್. ಕೋಟ್ಯಾನ್, ಮುಂಬೈ ಬಂಟರ ಸಂಘ ಉಪಾಧ್ಯಕ್ಷ ಎರ್ಮಾಳ್ ಜಗದೀಶ್ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್, ಟ್ರಸ್ಟಿ ಶೇಖರ್ ಎಂ.ಸುವರ್ಣ, ಪತ್ರಕರ್ತ ದಿನೇಶ್ ಕುಲಾಲ್ ಮೊದಲಾದವರು ನುಡಿನಮನ ಸಲ್ಲಿಸಿದರು. ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಾಲೆಟ್ ಪಿಂಟೋ, ಜಯ ಸುವರ್ಣರ ಪತ್ನಿ ಲೀಲಾವತಿ ಜಯ ಸುವರ್ಣ, ಪುತ್ರರಾದ ಸೂರ್ಯ ಜಯ ಸುವರ್ಣ, ಸುಭಾಸ್ ಜಯ ಸುವರ್ಣ, ದಿನೇಶ್ ಜಯ ಸುವರ್ಣ, ಯೋಗೀಶ್ ಜಯ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಂತಾಪ ಸಂದೇಶ ಕಳುಹಿಸಿದರು. ಭಾಸ್ಕರ್ ಎಂ. ಸಾಲ್ಯಾನ್ ವಂದಿಸಿದರು.