ಸಾಂಸ್ಕೃತಿಕ, ಸಾಮಾಜಿಕ, ವ್ಯವಹಾರಿಕ, ಔದ್ಯೋಗಿಕ ಕ್ಷೇತ್ರದ ಪ್ರಗತಿಗೆ ಮುನ್ನುಡಿ. ಮಂಗಳೂರು ದಸರಾ ಉತ್ಸವದ ಕಾರಣದಿಂದಾಗಿ ಸಾಮಾಜಿಕ ಕ್ಷೇತ್ರದಲ್ಲಿ, ಆರ್ಥಿಕ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಿಗೆ ದಿಕ್ಸೂಚಿಯಾಗಿದೆ. ಪ್ರವಾಸೋದ್ಯಮಕ್ಕೆ ಸಹಕಾರ, ಅನೇಕರಿಗೆ ಉದ್ಯೋಗ, ಕಾರ್ಮಿಕರಿಗೆ ಕೆಲಸ, ಸಾರಿಗೆ, ಹೋಟೆಲ್, ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ. ಹೀಗೆ ಒಟ್ಟಾರೆಯಾಗಿ ಕರಾವಳಿಯ ಆರ್ಥಿಕ ಚೇತರಿಕೆಗೆ ‘ಮಂಗಳೂರು ದಸರಾದ ಕೊಡುಗೆ ಅನನ್ಯ.
ಮಂಗಳೂರು: ಜಾತಿ-ಧರ್ಮದ ಅಸಮಾನತೆಯ ವಿರುದ್ಧ ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಪರಿವರ್ತನೆಯ ಶಂಖನಾದ ಮೊಳಗಿಸಿದ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳು ಶತಮಾನಗಳ ಹಿಂದೆ ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಪ್ರತಿಷ್ಠಾಪನೆ ಮಾಡಿ, ಅಸಮಾನತೆ, ಅಸ್ಪøಶ್ಯತೆಗೆ ಅಂತ್ಯ ಹಾಡಿದರು. ಪೂಜ್ಯ ಗುರುಗಳ ಸಂದೇಶಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಸನ್ಮಾನ್ಯ ಜನಾರ್ದನ ಪೂಜಾರಿಯವರು ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀ ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದರು. ಶ್ರೀ ಕ್ಷೇತ್ರದಿಂದ ಹತ್ತು ಹಲವಾರು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಶ್ರೀ ಗುರುಗಳ ಸಂದೇಶಗಳ ಅನುಷ್ಠಾನದಲ್ಲಿ ದೃಢ ಹೆಜ್ಜೆ ಇರಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ನವಚೈತನ್ಯ ನೀಡುತ್ತಿರುವ ಮಂಗಳೂರು ದಸರಾ

ಸನ್ಮಾನ್ಯ ಜನಾರ್ದನ ಪೂಜಾರಿಯವರ ಮಾರ್ಗದರ್ಶನ, ಸಹಾಯ, ಸಹಕಾರದಲ್ಲಿ ನಡೆಯುತ್ತಿರುವ ಅಭೂತಪೂರ್ವ ‘ಮಂಗಳೂರು ದಸರಾ’ ವರ್ಷದಿಂದ ವರ್ಷಕ್ಕೆ ಅಪಾರ ಜನಾಕರ್ಷಣೆಯಿಂದ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡು ವಿಶ್ವದ ಗಮನ ಸೆಳೆಯುತ್ತಿದೆ. ಸಂಪೂರ್ಣ ಕರ್ನಾಟಕ ಸರ್ಕಾರದ ಆಶ್ರಯದ ನೆರವಿನಲ್ಲಿ ನಡೆಯುತ್ತಿರುವ ‘ಮೈಸೂರು ದಸರಾ’ ವಿಶ್ವ ಪ್ರಸಿದ್ಧಿ ಪಡೆದಿರುವಂತೆ ಕಳೆದ 27 ವರ್ಷಗಳಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರ ಮುಂದಾಳುತನ, ಸಹಕಾರದಲ್ಲಿ ನಡೆಯುತ್ತಿರುವ ಮಂಗಳೂರಿನ ದಸರಾವೂ ವಿಶ್ವಖ್ಯಾತಿಗಳಿಸಿ ಜನಮನ್ನಣೆ ಪಡೆಯುತ್ತಿದೆ. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೆ ಸನ್ಮಾನ್ಯ ಜನಾರ್ದನ ಪೂಜಾರಿಯವರ ಸಾರಥ್ಯದಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿರುವ ‘ಮಂಗಳೂರು ದಸರಾ’ ಇಂದು ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದ ಚರಿತ್ರೆಯನ್ನೇ ಬದಲಾಯಿಸಿದೆ. ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ಹಾಗೂ ಸಮಗ್ರ ಅಭಿವೃದ್ಧಿಯ ರೂವಾರಿ ಸನ್ಮಾನ್ಯ ಜನಾರ್ದನ ಪೂಜಾರಿಯವರ ಬೆಂಬಲ, ಅಪೂರ್ವ ಸಂಕಲ್ಪ ಶಕ್ತಿಯಿಂದ ಕಳೆದ ಎರಡೂವರೆ ದಶಕಗಳಿಂದ ಅತ್ಯಂತ ವೈಭವದಿಂದ ಶಾರದೆ ನವದುರ್ಗೆಯರ ಶೋಭಾಯಾತ್ರೆ ನಡೆಯುತ್ತಿದ್ದು ಲಕ್ಷಾಂತರ ಮಂದಿಯ ಆಕರ್ಷಣೆಗೆ ಕಾರಣವಾಗಿದೆ. ‘ಮಂಗಳೂರು ದಸರಾ’ ಉತ್ಸವದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅತ್ಯಂತ ಯಶಸ್ವಿಯಾಗಿ ನಡೆಯಲು ಕಾರಣರಾದ ಪ್ರೇರಕ ಶಕ್ತಿಯೇ ಸನ್ಮಾನ್ಯ ಜನಾರ್ದನ ಪೂಜಾರಿಯವರು.
ಆರ್ಥಿಕ ಚಟುವಟಿಕೆಗಳ ಚೇತರಿಕೆ
ಪ್ರತಿ ವರ್ಷ ನಡೆಯುತ್ತಿರುವ ವೈಭವದ ‘ಮಂಗಳೂರು ದಸರಾ’ದ ಉತ್ಸವದಿಂದಾಗಿ ಕರಾವಳಿಯ ಆರ್ಥಿಕ ಚೇತರಿಕೆ, ವಿವಿಧ ರೀತಿಯ ಉದ್ಯೋಗ, ವ್ಯವಹಾರದ ಚಟುವಟಿಕೆ ಮೇಲ್ನೋಟಕ್ಕೆ ಗೋಚರಕ್ಕೆ ಬರುತ್ತಿಲ್ಲ. ಆದರೆ ಕರಾವಳಿಯ ಪ್ರವಾಸೋದ್ಯಮ, ವ್ಯಾಪಾರ ಅಭಿವೃದ್ಧಿ, ಜತೆಗೆ ಆರ್ಥಿಕ ವ್ಯವಹಾರ ಸೇರಿದಂತೆ ಹತ್ತಾರು ಆರ್ಥಿಕ ಚಟುವಟಿಕೆಗಳಿಂದ ಹೊಸ ಹೊಸ ಅವಕಾಶಗಳು ತೆರೆದುಕೊಂಡಿದೆ.
ಪ್ರವಾಸಿಗರ ಆಕರ್ಷಣೆ
ಜನಸಮುದಾಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷವಾಗಿ ‘ಮಂಗಳೂರು ದಸರಾ’ ವಿಶೇಷವಾದ ಕೊಡುಗೆ ನೀಡುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ದಸರಾ ಉತ್ಸವ ವೀಕ್ಷಣೆಗೆ ಮಂಗಳೂರು ನಗರಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರವಾಸಿ ತಾಣ, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಪ್ರವಾಸೋದ್ಯಮದ ಆಕರ್ಷಣೆಯಲ್ಲಿ ಮಹತ್ವಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ.

ವ್ಯಾಪಾರ, ವ್ಯವಹಾರ ಪ್ರಗತಿ
ಮಂಗಳೂರು ದಸರಾ ಉತ್ಸವದ ಸಂದರ್ಭದಲ್ಲಿ ಮಂಗಳೂರಿನ ಹೋಟೆಲ್ ಉದ್ಯಮ, ವಸತಿ ಗೃಹ, ವ್ಯಾಪಾರಿ ಮಳಿಗೆಗಳು, ಚಿಕ್ಕ ಪುಟ್ಟ ಅಂಗಡಿಗಳಲ್ಲೂ ಹೆಚ್ಚಿನ ವ್ಯವಹಾರ ನಡೆದು ಅವರೆಲ್ಲರ ವ್ಯಾಪಾರಾಭಿವೃದ್ಧಿಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿದೆ. ಓರ್ವ ಕೂಲಿಯಾಳುಗಳಿಂದ ಹಿಡಿದು, ದೀಪಾಲಂಕಾರ, ಶಾಮಿಯಾನದವರು ಸೇರಿದಂತೆ ಹತ್ತಾರು ಮಂದಿಗೆ ಉದ್ಯೋಗದ ಅವಕಾಶ ದೊರಕಿ ಅವರ ಆರ್ಥಿಕ ಬಲವರ್ಧನೆ ಸಾಧ್ಯವಾಗಿದೆ. ಆಟೋ ರಿಕ್ಷಾದವರಿಂದ ಹಿಡಿದು ದೊಡ್ಡ ದೊಡ್ಡ ಸಾರಿಗೆ ಉದ್ಯಮದವರಿಗೂ ಈ ಸಂದರ್ಭದಲ್ಲಿ ಅತ್ಯಧಿಕ ವ್ಯವಹಾರ ನಡೆದು ಅವರ ಆರ್ಥಿಕ ಚೇತರಿಕೆಗೆ ಶಕ್ತಿ ತುಂಬಿದೆ. ‘ಮಂಗಳೂರು ದಸರಾ’ ಸಂದರ್ಭದಲ್ಲಿ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಅನೇಕ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರಕಿ ಅವರೆಲ್ಲರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಿದೆ.

ಶ್ರೀ ಗೋಕರ್ಣನಾಥ ಕ್ಷೇತ್ರದ ಸನ್ನಿಧಾನಕ್ಕೆ ಬರುವ ಲಕ್ಷಾಂತರ ಭಕ್ತರು ಇಲ್ಲಿನ ಭೇಟಿಯಿಂದ ಶಾಂತಿ, ಸಮಾಧಾನ, ಮಾನಸಿಕ ನೆಮ್ಮದಿ, ಆತ್ಮಸ್ಥೈರ್ಯ ಪಡೆದುಕೊಳ್ಳುವ ಮೂಲಕ ಯಾರೂ ಬೆಲೆ ಕಟ್ಟಲಾಗದ ಅನುಭವಗಳನ್ನು ಪಡೆಯುತ್ತಿದ್ದಾರೆ. ಶ್ರೀ ಕ್ಷೇತ್ರದ ವಿಶೇಷ ಕಾರಣಿಕ ಶಕ್ತಿಯಿಂದ ಈ ಕ್ಷೇತ್ರದ ಭೇಟಿಯಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯೊಂದಿಗೆ ಆಯುರಾರೋಗ್ಯ ಭಾಗ್ಯ ಪಡೆದು ಕೃತಾರ್ಥರಾಗುತ್ತಿದ್ದಾರೆ.
ಶ್ರೀ ಕ್ಷೇತ್ರದ ನವೀಕರಣದೊಂದಿಗೆ ಸ್ವರ್ಗ ಸಮಾನ ಚೆಲುವನ್ನು ದೊರಕಿಸಿ, ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ, ಹತ್ತು ಹಲವು ಸಾಮಾಜಿಕ ಕ್ರಾಂತಿಕಾರಿ ಸುಧಾರಣಾ ಕಾರ್ಯಗಳೊಂದಿಗೆ ಶ್ರೀ ಕ್ಷೇತ್ರದ ವತಿಯಿಂದ ನಿರಂತರ ಹಲವು ಸಾಮಾಜಿಕ ಸೇವಾ ಕಾರ್ಯಗಳ ಅನುಷ್ಠಾನಕ್ಕೆ ಶಕ್ತಿ, ಪ್ರೇರಣೆ ತುಂಬುವ ಜೊತೆಗೆ ‘ಮಂಗಳೂರು ದಸರಾ’ದ ಮೂಲಕ ಕರಾವಳಿಯ ಆರ್ಥಿಕ ಚೇತರಿಕೆಗೆ ಕಾರಣರಾದ ಸನ್ಮಾನ್ಯ ಜನಾರ್ದನ ಪೂಜಾರಿಯವರ ಅಪೂರ್ವ ಕಾರ್ಯಕ್ಕೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸುವ ಜತೆಗೆ ಅವರ ಅಭೂತಪೂರ್ವ ಸೇವಾ ಕೈಂಕರ್ಯಕ್ಕೆ ಋಣಿಯಾಗಬೇಕಿದೆ. ‘
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎಂದು ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಈ ದೇವಾಲಯ ಸರ್ವಧರ್ಮೀಯರಿಗೂ ಪೂಜ್ಯನೀಯ ಕ್ಷೇತ್ರವೆನಿಸಿದೆ. ವಿಶ್ವಮಾನವತೆಯ ಪರಂಪರೆಯನ್ನು ಬಲವಾಗಿ ಪ್ರತಿಪಾದಿಸಿದ, ಜನರಿಗೆ ಆಧ್ಯಾತ್ಮಿಕತೆ, ವೈಚಾರಿಕ ಬೆಳಕನ್ನು ಸರಳವಾಗಿ ತೋರಿಸಿದ ಗುರುಗಳ ಕನಸುಗಳನ್ನು ಸಾಕಾರಗೊಳಿಸುವ ಕೆಲಸವನ್ನು ಈ ದೇವಸ್ಥಾನ ಮಾಡುತ್ತಿದೆ. ಕಳೆದ 29 ವರ್ಷಗಳಿಂದ ದೇವಸ್ಥಾನ, ದೇಶ, ವಿದೇಶಗಳ ಜನರನ್ನು ಬಹಳವಾಗಿ ಸೆಳೆಯುತ್ತಿದೆ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕ್ಷೇತ್ರ ನವೀಕರಣ ಸಹಿತ ಹಲವು ಅಭಿವೃದ್ಧಿಕಾರ್ಯಗಳನ್ನು ದೇವಸ್ಥಾನ ಕಂಡಿದೆ.