ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಅ.17ರಿಂದ ಆರಂಭಗೊಂಡಿದ್ದು, ಅ.27ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದಸರಾ ಮಹೋತ್ಸವದ ದರ್ಬಾರು ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡ ಮಹಾಗಣಪತಿ, ನವದುರ್ಗೆ, ಆದಿಶಕ್ತಿ ಮತ್ತು ಶಾರದೆಯ ಮೂರ್ತಿ ಅ.26ರಂದು ರಾತ್ರಿ ವಿಸರ್ಜನೆಗೊಳ್ಳಲಿದೆ.
ಇಂದು ಸೀಯಾಳಾಭಿಷೇಕ: ಅ.25ರಂದು ಬೆಳಗ್ಗೆ 10.00ಕ್ಕೆ ಸರಸ್ವತಿ ದುರ್ಗಾಹೋಮ, 11.30ಕ್ಕೆ ಶತ ಸೀಯಾಳಾಭಿಷೇಕ, 12.30ಕ್ಕೆ ಶಿವಪೂಜೆ (ಮಹಾ ನವಮಿ), ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಸಂಜೆ 7.00ರಿಂದ 9.00ರನತಕ ಭಜನಾ ಕಾರ್ಯಕ್ರಮ ರಾತ್ರಿ 9.00ರಿಂದ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಲಿದೆ.

ಇಂದು ವಿಸರ್ಜನೆ: ಅ.26ರ ಸೋಮವಾರದಂದು ಬೆಳಗ್ಗೆ 10.00ಕ್ಕೆ ವಾಗೀಶ್ವರಿ ದುರ್ಗಾ ಹೋಮ, 1.00ಕ್ಕೆ ಶಿವಪೂಜೆ, 1.15ಕ್ಕೆ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ರಾತ್ರಿ 7.30ರಿಂದ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ನವದುರ್ಗೆ, ಶ್ರೀಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.
ಅ.27ರಂದು ರಾತ್ರಿ 7.00ರಿಂದ 8.00 ಭಜನಾ ಕಾರ್ಯಕ್ರಮ, ರಾತ್ರಿ 8.00ಕ್ಕೆ ಗುರುಪೂಜೆ ನಡೆಯಲಿದೆ.
